ವಿದ್ಯಾರ್ಥಿವೇತನ ವಿತರಣೆ

ಧಾರವಾಡ, ಜು.19: ಧಾರವಾಡ ಕೇಂದ್ರ ಕಾರಾಗೃಹದಲ್ಲಿನ 21 ಜನ ಬಂದಿಗಳ ಮಕ್ಕಳಾದ ಒಟ್ಟು 34 ವಿದ್ಯಾರ್ಥಿಗಳಿಗೆ ಒಂದು ಲಕ್ಷ 35 ಸಾವಿರ ರೂ.ಗಳ ವಿದ್ಯಾರ್ಥಿ ವೇತನವನ್ನು ಬೆಂಗಳೂರಿನ ಜನೋದಯ ಟ್ರಸ್ಟ್‍ದಿಂದ ವಿತರಿಸಲಾಗಿದೆ.

ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಾಗೃಹ ಅಧೀಕ್ಷಕ ಎಂ.ಎ. ಮರಿಗೌಡ ವಹಿಸಿದ್ದರು. ಜನೋದಯ ಟ್ರಸ್ಟ್‍ನ ಮುಖ್ಯಸ್ಥೆ ರಾಣಿ ಅವರು ಟ್ರಸ್ಟ್‍ನ ಕಾರ್ಯಚಟುವಟಿಕೆಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಕಾರಾಗೃಹದ ಸಹಾಯಕ ಅಧೀಕ್ಷಕ ಎಸ್.ಡಿ.ಗಲ್ಲೆ, ಶೋಭಾ, ಕೃಷ್ಣಮೂರ್ತಿ ಹಾಗೂ ವಿಜಯಕುಮಾರ, ಶಿಕ್ಷಕ ಪಿ.ಬಿ.ಕುರಬೆಟ್ಟ ಉಪಸ್ಥಿತರಿದ್ದರು.