ವಿದ್ಯಾರ್ಥಿವೇತನ ಮಂಜೂರು ಮಾಡಿಸಿಕೊಡಲು ಮನವಿ

ಸಂಜೆವಾಣಿ ವಾರ್ತೆ

 ಹಿರಿಯೂರು.ಜ.22- ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ (2022-23) ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿವೇತನ (ಎನ್‌ಎಸ್‌ಪಿ / ಎಸ್‌ಎಸ್‌ಪಿ) ಮಂಜೂರು ಆಗದೆ ಇರುವುದರಿಂದ  ಶೈಕ್ಷಣಿಕ ಶುಲ್ಕವನ್ನು ಪಾವತಿಸಲು ತೊಂದರೆಯಾಗಿರುತ್ತದೆ.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ವಿದ್ಯಾರ್ಥಿ ವೇತನ ಮಂಜೂರು ಆಗದೆ ಹೋದರೆ ನಮ್ಮ ಶೈಕ್ಷಣಿಕ ಅಭ್ಯಾಸಕ್ಕೆ ತೊಂದರೆಯುಂಟು ಆಗಲಿದೆ. ಆದ್ದರಿಂದ ತಾವುಗಳು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ ಆದಷ್ಟು ಬೇಗನೆ ನಮ್ಮ ವಿದ್ಯಾರ್ಥಿವೇತನ ನಮಗೆ ಸಿಗುವ ಹಾಗೆ ಮಾಡಬೇಕೆಂದು ವಿದ್ಯಾರ್ಥಿಗಳಾದ ಇಮ್ರಾನ್ ಮತಿನ್ ಮಹಬೂಬ್ ಮತ್ತಿತರರು ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿರುತ್ತಾರೆ .2022-23ನೇ ಸಾಲಿನಲ್ಲಿ ಮೊದಲನೇ ವರ್ಷಕ್ಕೆ ದಾಖಲಾದ ಸಂದರ್ಭದಲ್ಲಿ ಎನ್‌ಎಸ್‌ಪಿ ವಿದ್ಯಾರ್ಥಿವೇತನವು ಮುಕ್ತಾಯಗೊಂಡಿದ್ದು, ನಾವುಗಳು ಯಾರೂ ಪ್ರಸಕ್ತ ಸಾಲಿಗೆ ಎನ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಸಾಧ್ಯವಾಗಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿವೇತನವನ್ನು ಸಹ ಕೊಡಿಸಿಕೊಡಬೇಕೆಂದು ಮನವಿ ಪತ್ರ ನೀಡಿರುತ್ತಾರೆ.