
ತಾಳಿಕೋಟೆ:ಸೆ.7: ಸತತವಾಗಿ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾತ್ರ ನಾವು ಇಟ್ಟ ಗುರಿಯನ್ನು ತಲುಪಲು ಸಾಧ್ಯ ಗುರಿ ನಮ್ಮ ಭವಿಷ್ಯತ್ತನ್ನು ಬದಲಾಯಿಸುತ್ತದೆ ಮತ್ತು ಸೋಲು ಗೆಲುವನ್ನು ಪ್ರೀತಿಸುವವನು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾದ್ಯವೆಂದು ವೀರಶೈವ ವಿಧ್ಯಾವರ್ದಕ ಸಂಘದ ಸಹ ಕಾರ್ಯದರ್ಶಿ ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಕಾಶಿನಾಥ ಮುರಾಳ ಅವರು ಹೇಳಿದರು.
ಬುಧವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಬೆಂಗಳೂರು ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದ ಸಾಂಸ್ಕೃತಿಕ ವಿಭಾಗದ ವತಿಯಿಂದ ಆಯೋಜಿಸಲಾದ ಪ್ರಶಿಕ್ಷಣ ಭಾರತಿ ಒಂದು ದಿನದ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ವಿಧ್ಯಾರ್ಥಿಗಳಲ್ಲಿ ಛಲವೆಂಬುದು ಇರಬೇಕು ಮತ್ತು ಗುರಿ ಎಂಬುದು ಇರಬೇಕು ಅದರ ಜೊತೆಗೆ ಗುರುವಿನ ಮಾರ್ಗದರ್ಶನವಿದ್ದರೆ ಅಸಾದ್ಯವಾದುದ್ದು ಯಾವುದು ಇಲ್ಲಾವೆಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಷ್ಟ್ರೋತ್ಥಾನ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ನಿಂಗರಾಜ ಮನಗೂಳಿ ಇವರು ಮಾತನಾಡಿ ಸಸಕ್ತ ಸದೃಢ ಸಮಾಜ ನಿರ್ಮಾಣಕ್ಕಾಗಿ ಹಾಗೂ ಆರ್ಥಿಕ ದುರ್ಬಲ ವರ್ಗಗಳ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡು ಹುಟ್ಟಿಕೊಂಡ ಈ ಸಂಸ್ಥೆ ಇಂದು ದುರ್ಬಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಯೋಗ್ಯ ತರಬೇತಿಗೊಳಿಸುವುದರ ಮೂಲಕ ಒಳ್ಳೆಯ ಪ್ರಜೆಯನ್ನು ನಿರ್ಮಾಣ ಮಾಡುವ ದಿಶೆಯಲ್ಲಿ ದಾಪುಗಾಲು ಇಟ್ಟು ಇಂದು ಮುನ್ನಡೆಯುತ್ತಿದೆ ಎಂದು ಹೇಳಿದ ಅವರು ಮಗುವಿನಲ್ಲಿ ಮಾನವೀಯ ಮೌಲ್ಯ ನೈತಿಕ ಗುಣ ಬೆಳೆಸಿದಾಗ ಸಾಮರಸ್ಯದ ಬದುಕು ಸುಂದರಗೊಳತ್ತದೆ ಮತ್ತು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಒಡಮೂಡುತ್ತದೆ ಆ ದಿಶೆಯಲ್ಲಿ ನಿಮ್ಮ ಚಿಂತನೆಗಳು ಇರಲಿ ಸ್ವ ಉದ್ಯೋಗ ಭಾರತೀಯ ಸಾಹಿತ್ಯ ಆರೋಗ್ಯ ಸೇವಾ ಮನೋಭಾವ ಮೂಡಿಸುವ ಹೆಗ್ಗುರುತು ಈ ಸಂಸ್ಥೆಗೆ ಗುರಿಯಾಗಿದೆ ಎಂದು ಹೇಳಿದರು.
ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಮೇಶ ಭಂಟನೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಶಿಕ್ಷಣಾರ್ಥಿಗಳ ಏಳಿಗೆಗೆ ಇಂತಹ ಕಾರ್ಯಗಾರಗಳು ಅತ್ಯವಶ್ಯವಾಗಿವೆ ಬದುಕನ್ನು ಬದಲಾಯಿಸುವ ಹೊಸ ಆಲೋಚನೆಗಳು ಹುಟ್ಟು ಹಾಕುವ ಮತ್ತು ವಿದ್ಯಾರ್ಥಿಯ ಬದುಕನ್ನು ಹಸನಗೊಳಿಸಲಿಕ್ಕೆ ಮೇಲಿಂದ ಮೇಲೆ ಇಂತಹ ಕಾರ್ಯಾಗಾರಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಾ ಬಂದಿವೆ ರಾಷ್ಟ್ರೋತ್ತಾನ ಪರಿಷತ್ ಬೆಂಗಳೂರ ಅವರು ನಮ್ಮ ಸಂಸ್ಥೆಯಲ್ಲಿಯ ವಿಧ್ಯಾರ್ಥಿಗಳು ಪ್ರತಿಭಾವಂತರಿದ್ದು ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಈ ಕಾಯಾಗಾರವನ್ನು ಹಮ್ಮಿಕೊಂಡಿರುವದು ಸಂತಸ ತಂದಿದೆ ಎಂದರು.
ಪಂಚಮುಖಿ ಶಿಕ್ಷಣದ ಕುರಿತು ರಾಷ್ಟ್ರೋತ್ಥಾನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಾದ ಶ್ರೀನಿವಾಸ ಪಾಟೀಲ ಹಾಗೂ ಸಾಮಾಜಿಕ ಕಾರ್ಯಕರ್ತರಾದ ದಿನಕರ ದೇಸಾಯಿ ಅವರು ಭಾರತ ದೇಶದ ದರ್ಶನದ ಕುರಿತು ಹಾಗೂ ಸಿಂದಗಿ ಪಟ್ಟಣದ ಎಚ್.ಜಿ. ಪಿಯು ಕಾಲೇಜನ ಪ್ರಾಚಾರ್ಯರಾದ ಎ.ಆರ್.ಹೆಗ್ಗನದೊಡ್ಡಿ ಅವರು ಶಿಕ್ಷಣದ ಪರಿಕಲ್ಪನೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಮಯದಲ್ಲಿ ಉಪನ್ಯಾಸಕರಾದ ಯು.ಎನ್.ಮಂಗೊಂಡ, ವಾಯ್.ಎಚ್.ಅಂಗಡಗೇರಿ, ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು, ಹಾಗೂ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ರಕ್ಷಿತಾ ಸಜ್ಜನ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಕುಮಾರಿ ಅಕ್ಷತಾ ಬಂಡಿ ನಿರೂಪಿಸಿದರು. ಶಿಕ್ಷಣಾರ್ಥಿ ಅಕ್ಷಯಕುಮಾರ ಬಿರಾದಾರ ವಂದಿಸಿದರು.