ವಿದ್ಯಾರ್ಥಿಯ ಪ್ರತಿಭೆ ವಿಕಸನಕ್ಕೆ ಶಿಕ್ಷಕರ ಸಹಕಾರ ಅಗತ್ಯ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.30:  ವಿದ್ಯಾರ್ಥಿಯ ಪ್ರತಿಭೆ ವಿಕಸನಕ್ಕೆ ಶಿಕ್ಷಕರ ಸಹಕಾರ ಅಗತ್ಯ ಎಂದು ಯಾಳ್ಪಿ ಚಲನಚಿತ್ರದ ನಿರ್ದೇಶಕ ಎಂ.ಎಂ.ಓಬಳೇಶ್ ಅಭಿಪ್ರಾಯಪಟ್ಟರು.
ನಗರದ ಎಸ್.ಜಿ.ಟಿ ಕಾಲೇಜಿನ ‘ಹೊಂಗನಸು-2023’ ನೂತನ ಬಿ.ಕಾಂ ಮತ್ತು ಬಿ.ಬಿ.ಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪರಿಪೂರ್ಣ ಪ್ರತಿಭೆ ವಿಕಸನಗೊಳ್ಳಬೇಕಾದರೆ ವಿದ್ಯಾರ್ಥಿಗಳ ಪ್ರಯತ್ನದ ಜೊತೆಗೆ ಒಳ್ಳೆಯ ಶಿಕ್ಷಕರ ಪ್ರಭಾವ ಬದುಕಿಗೆ ತಿರುವು ತರುತ್ತದೆ ಎಂದರು. ಶಿಕ್ಷಕರೆ ವಿದ್ಯಾರ್ಥಿಗಳನ್ನು ರೂಪಿಸುವ ಶಿಲ್ಪಿಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಜಿ.ಟಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎನ್ ರುದ್ರಪ್ಪರವರು ಮಾತನಾಡಿ ತಂದೆ ಮತ್ತು ತಾಯಿಗಳೆ ಪ್ರತ್ಯಕ್ಷ ದೇವರುಗಳು ಅವರೊಂದಿಗೆ ಹೇಗೆ ವರ್ತಿಸುತ್ತಾರೆಂಬುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿ ದ್ಯಾನವನ್ನು ಮಾಡಿಸುತ್ತಾ ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಇಚ್ಚಾ ಶಕ್ತಿಯನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಎಸ್.ಜಿ.ಟಿ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗರಾಜ್‍ರವರು ಒಂದು ಚಲನಚಿತ್ರ ಯಶಸ್ವಿಯಾಗಬೇಕಾದರೆ ಮೊದಲು ಕಥೆ ನಂತರ ನಿರ್ದೇಶನ, ಕಥಾನಾಯಕ, ನಾಯಕಿ, ಸಂಭಾಷಣೆ, ಹಾಡು, ಪೈಟ್ಸ್, ನಟನೆ ಇತ್ಯಾದಿಗಳು ಪ್ರಮುಖವಾದರೆ ಮತ್ತೊಂದು ಪ್ರಮುಖವಾದ ಪಾತ್ರ ನಿರ್ಮಾಪಕರ ಜವಬ್ದಾರಿತನ ವಾಗಿರುತ್ತದೆ. ಈ ಎಲ್ಲಾ ಪ್ರತಿಭೆಗಳನ್ನು ಹೊಂದಿರುವ ಅಂತ್ಯಂತ ವಿರಳ ವ್ಯಕ್ತಿ ಎಂ.ಎಂ.ಓಬಳೇಶ್‍ರವರಾಗಿದ್ದಾರೆ. ಇವರು ನಮ್ಮ ಕಾಲೇಜಿನ ಯುವ ಪ್ರತಿಭೆ ಲೋಹನರನ್ನು  ಚಿತ್ರದ ನಾಯಕಿಯನ್ನಾಗಿ ಮಾಡಿದ್ದಾರೆ ಎಂದರು. 
ವೈದ್ಯಕೀಯ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗು ನೂತನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ದೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಿ.ಕಾಂ ವಿಭಾಗದಿಂದ ಜಿ.ಪಿ ರಾಜ ಮತ್ತು ರಂಜಿತ, ಬಿ.ಬಿ.ಎ ವಿಭಾಗದಿಂದ ವಿಷ್ಣುಸಾಯಿ ಹಾಗು ಸಂಜನ ಇವರುಗಳು ಬೆಸ್ಟ್ ಪ್ರೆಷರ್ಸ್ ಆಗಿ ಬಹುಮಾನ ಪಡೆದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೇಯ ಮತ್ತು ನಾಗರ್ಶಿತ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಮಗಳು ಬಹಳ ಸುಂದರವಾಗಿ ಮೂಡಿಬಂದವು. ಕಾರ್ಯಕ್ರಮದಲ್ಲಿ ಎಸ್.ಜಿ.ಟಿ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಕಾಶ್ ಓ ಸಾರಂಗಮಠ, ವಿವಿದ ವಿಭಾಗಗಳ ಮುಖ್ಯಸ್ತರುಗಳಾದ ಇರ್ಷಾದ್ ಅಲಿ, ರೀನಾರೆಡ್ಡಿ, ರೂಪ ಆರ್, ಶ್ರೀದೇವಿ ಉಪನ್ಯಾಸಕರುಗಳಾದ ಸಾವಿತ್ರಿ ಮಸ್ಕಿ, ಶರಣ್ಯ, ರಾಜು, ಧನಂಜಯ ಭಟ್, ಅಮೀನ್, ಮೇಘನ, ರುದ್ರಮ್ಮ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.