ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಕರವೇ ಸ್ವಾಭಿಮಾನ ಬಣ ಪ್ರತಿಭಟನೆ

ವಿಜಯಪುರ,ಏ.30:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಉತ್ತರ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅನಂತರ ಈ ಸಂಬಂಧ ಜಿಲ್ಲಾ ಆಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಉತ್ತರ ಕರ್ನಾಟಕ ಸಂಘಟನೆ ಅಧ್ಯಕ್ಷÀ ಲಕ್ಷ್ಮಣ ಕಂಭಾಗಿ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ರಕ್ಷಣೆ ಇಲ್ಲದೇ ಇರುವುದು ಇಂತಹ ಘಟನೆಗಳಿಗೆ ಕಾರಣವಾಗಿವೆ. ಎಂ.ಸಿ.ಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ (24) ಎಂಬ ವಿದ್ಯಾರ್ಥಿನಿಯನ್ನು ಹಾಡಹಗಲೆ ಚಾಕುವಿನಿಂದ ಇರಿದು ಕೊಲೆಮಾಡಿರುವುದು ಅತ್ಯಂತ ಖಂಡನೀಯ. ಈಗಾಗಲೇ ಕೊಲೆಗಾರನನ್ನು ಬಂಧಿಸಿದ್ದರೂ ಈ ಕುರಿತು ತಕ್ಷಣ ಸೂಕ್ತ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕೆಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆದರೆ ಜಸ್ಟಿಸ್ ವರ್ಮಾ ಮತ್ತಿತರ ಶಿಫಾರಸ್ಸು ಆಧಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸೂಕ್ತ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷÀ ಜಗದೇವ ಸೂರ್ಯವಂಶಿ, ಗಿರೀಶ ಕಲಘಟಗಿ, ಸಂಕೇತ ಪಟ್ಟಣದ, ಸಿದ್ರಾಮ ಹಳ್ಳೂರ, ಶೋಭಾ ಪಾಟೀಲ, ಕೇಸರಿ ನನಮ, ಚಂದ್ರಶೇಖರ ಕಡಕೋಳ, ಪ್ರಭು ಮಂಕಣಿ, ಮಲ್ಲಯ್ಯ ಹಿರೇಮಠ, ಶಿವು ಕುಂಬಾರ, ಬಸಲಿಂಗಪ್ಪ ಕಪಾಳಿ, ವೆಂಕಟೇಶ ಮರತಿಮನಿ, ಖಾಜಾಬಿನ ನದಾಫ, ಸಾಹೇಬಗೌಡ ಬಿರಾದಾರ, ಶಫೀಕ ಗಂಗನಳ್ಳಿ, ಮಹಾಂತೇಶ ತಳವಾರ, ಮಂಜೂರ ನಾಗರಬಾವಡಿ, ಸರ್ಫರಾಜ ಗಂಗನಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.