ವಿದ್ಯಾರ್ಥಿನಿ ಚುಂಬಿಸಿ ವಿದ್ಯಾರ್ಥಿಗಳ ಹುಚ್ಚಾಟ

ಮಂಗಳೂರು, ಜು. ೨೧- ಸಿನಿಮಾ ದೃಶ್ಯದಂತೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ಚುಂಬಿಸಿರುವ ಘಟನೆ ಮಂಗಳೂರಿನ ಕಾಲೇಜಿನಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಹರಟೆ ಹೊಡೆಯುತ್ತಾ ಮೊಬೈಲ್ ಗೇಮ್‌ನಲ್ಲಿ ತಲ್ಲೀನರಾಗಿದ್ದಾಗ ಏಕಾಏಕಿ ಸವಾಲು ಹಾಕಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿಯನ್ನು ಚುಂಬಿಸುವಂತೆ ಸವಾಲು ಹಾಕಿದ್ದಾರೆ.
ಈ ಸವಾಲನ್ನು ಒಪ್ಪಿಕೊಂಡ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ಚುಂಬಿಸಿದ್ದಾನೆ. ಚುಂಬಿಸಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿದ್ಯಾರ್ಥಿಗಳ ಪುಂಡಾಟದ ಬಗ್ಗೆ ಎಚ್ಚೆತ್ತುಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.