ವಿದ್ಯಾರ್ಥಿನಿ ಐಶ್ವರ್ಯ ಸ್ವಯಂಪ್ರೇರಣೆಯ ಸಾಧನೆ ಶ್ಲಾಘನೀಯ

ಕುಂದಗೋಳ ನ 4 : ಗ್ರಾಮೀಣ ಪ್ರದೇಶಗಳು ಕ್ರೀಡೆಗೆ ಪೆÇ್ರೀತ್ಸಾಹ ಸಿಗುವುದು ಬಹಳ ವಿರಳ ಪೆÇ್ರೀತ್ಸಾಹ ಇಲ್ಲದೆ ಸ್ವಯಂ ಪ್ರೇರಣೆಯಿಂದ ಸಾಧನೆ ಮಾಡುವಂಥ ವಿದ್ಯಾರ್ಥಿಗಳ ಸಾಲಿನಲ್ಲಿ ಪಟ್ಟಣದ ಐಶ್ವರ್ಯ ಹುಬ್ಬಳ್ಳಿಮಠ ವಿದ್ಯಾರ್ಥಿನಿ ಸಾಕ್ಷಿ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎಸ್ಪಿ.ಕೆ. ಕೃಷ್ಣಕಾಂತ್ ಹೇಳಿದರು
ಅವರು ಮಂಗಳವಾರ ಪಟ್ಟಣದ ಐಶ್ವರ್ಯ ರಾಜಶೇಖರ ಹುಬ್ಬಳ್ಳಿಮಠ ವಿದ್ಯಾರ್ಥಿನಿ ಇತ್ತೀಚೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಜಂಪ್ ರೋಪ್ ಚಾಂಪಿಯನ್ ಶಿಪ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆಗೈದು ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ ಎಂದರು.
ನಾನು ಇತ್ತೀಚಿಗೆ ಎಸ್ಪಿ ಅಧಿಕಾರ ಸ್ವೀಕರಿಸಿದ ನಂತರ ಕೆಲಸದ ನಿಮಿತ್ತ ಇರುವಾಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪತ್ರಿಕೆಯಲ್ಲಿ ಈ ವಿದ್ಯಾರ್ಥಿಯ ಸಾಧನೆ ನೋಡಿ ಖುಷಿಯಾಯಿತು.
ಹೀಗಾಗಿ ಅವರ ಮನೆಗೆ ಭೇಟಿ ನೀಡಿ ಐಶ್ವರ್ಯ ರಾಜಶೇಖರ್ ಹುಬ್ಬಳ್ಳಿಮಠ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಿದ ಅವರು ಪೆÇೀಷಕರನ್ನು ಪೆÇ್ರೀತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಕಲೆ ಇರುತ್ತದೆ ಅವುಗಳನ್ನು ಬೆಳಕಿಗೆ ತರುವಂತಹ ಕೆಲಸ ಪಾಲಕರು ಹಾಗೂ ಶಿಕ್ಷಕರ ಮೇಲಿರುತ್ತದೆ ಓದಿನ ಜೊತೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರತರಬೇಕೆಂದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ನಿಮ್ಮ ಪೆÇ್ರೀತ್ಸಾಹಕ್ಕೆ ಸದಾ ನಮ್ಮ ಸಹಾಯ ಸಹಕಾರ ಇರುತ್ತದೆ ಎಂದು ಹೇಳಿದರು
ನಂತರ ಡಿವೈಸ್ಪಿ ರವಿ ನಾಯಕ್ ಮಾತನಾಡಿ ಎಸ್ಪಿ ಸಾಹೇಬರು ವಿದ್ಯಾರ್ಥಿಯ ಸಾಧನೆ ನೋಡಿ ಅವರ ಮನೆಗೆ ಹೋಗಿ ವಿದ್ಯಾರ್ಥಿಯನ್ನು ಗೌರವಿಸಿ ಪೆÇ್ರೀತ್ಸಾಹಿಸಿರುವುದು ಇತರ ಮಕ್ಕಳಲ್ಲೂ ಒಂದು ರೂಪು ತುಂಬಿದಂತಾಗುತ್ತದೆ ಹೇಳಿದರು. ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಬೇಕು ಕರೆ ನೀಡಿದರು.
ಸಂದರ್ಭದಲ್ಲಿ. ಸಿಪಿಐ ಬಸವರಾಜ್ ಕಲ್ಲಮ್ಮನವರ ಹಾಗೂ ವಿದ್ಯಾರ್ಥಿನಿಯ ಕುಟುಂಬದವರು ಉಪಸ್ಥಿತರಿದ್ದರು.