ವಿದ್ಯಾರ್ಥಿನಿಯರ ಹೋರಾಟ ಯಶಸ್ವಿ ವಸತಿ ನಿಲಯ ಪ್ರವೇಶಕ್ಕೆ ಅವಕಾಶ

ಕಲಬುರಗಿ,ಜ.6-ವೃತ್ತಿಪರ ಕಾಲೇಜುಗಳು ಆರಂಭವಾದರೂ ಸಹ ವಿದ್ಯಾರ್ಥನಿಯರಿಗೆ ವಸತಿ ನಿಲಯದಲ್ಲಿ ಪ್ರವೇಶ ನೀಡದೇ ಇರುವುದನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ವಿದ್ಯಾರ್ಥಿನಿಯರು ನಡೆಸಿದ ಹೋರಾಟ ಯಶಸ್ವಿಯಾಗಿದೆ.
ಇದರಿಂದ ವೃತ್ತಿಪರ ಕೋರ್ಸ್ ಗಳಾದ ಡಿಪ್ಲೋಮಾ, ಬಿ.ಎಡ್, ಡಿ.ಎಡ್.,ಇಂಜಿನಿಯರಿಂಗ್, ಎಲ್.ಎಲ್.ಬಿ., ನರ್ಸಿಂಗ್ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿ ಪ್ರವೇಶ ದೊರಕಿದಂತಾಗಿದೆ.
ಹಳ್ಳಿ ಮತ್ತು ಜಿಲ್ಲೆಯ ಬೇರೆ ಬೇರೆ ಕಡೆಯಿಂದ ವೃತ್ತಿಪರ ಕೋರ್ಸ್ ಗಳಾದ ಡಿಪ್ಲೋಮಾ, ಬಿ.ಎಡ್., ಡಿ.ಎಡ್, ಇಂಜಿನಿಯರಿಂಗ್, ಎಲ್.ಎಲ್.ಬಿ., ನರ್ಸಿಂಗ್ ಅಂತಿಮ ವರ್ಷದಲ್ಲಿ ಓದಲು ಆಗಮಿಸಿದ್ದ ವಿದ್ಯಾರ್ಥನಿಯರು ವಸತಿ ನಿಲಯ ಪ್ರವೇಶದಿಂದ ವಂಚಿತರಾಗಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥನಿಯರ ಸಮಸ್ಯೆಗೆ ಸ್ಪಂದಿಸಿ ವಸತಿ ನಿಲಯದಲ್ಲಿ ಇರುವುದಕ್ಕೆ ಅವಕಾಶ ನೀಡಿದ್ದಾರೆ. ಅಲ್ಲದೆ ಕೋವಿಡ್ ಪರೀಕ್ಷೆ ಮಾಡಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ.
ಎಐಡಿಎಸ್ಓ ಜಿಲ್ಲಾಧ್ಯಕ್ಷ ಹಣಮಂತ ಎಸ್.ಹೆಚ್., ಜಿಲ್ಲಾ ಕಾರ್ಯದರ್ಶಿ ಈರಣ್ಣಾ ಇಸಬಾ, ಮಂಜುಳಾ, ಶಿಲ್ಪಾ, ಪ್ರೀತಿ, ಸ್ನೇಹ ಕಟ್ಟಿಮನಿ, ಭೀಮಾಶಂಕರ, ಗೋದಾವರಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.