ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಭದ್ರತೆ ಒದಗಿಸಲು ಮನವಿ

ಚಿಂಚೋಳಿ,ನ.15- ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳÀ ವಿದ್ಯಾರ್ಥಿನಿಯರ ಭದ್ರತೆಗಾಗಿ ಹಗಲು ರಾತ್ರಿ ಎರಡು ಅವಧಿಯಲ್ಲಿ ಇಲ್ಲಿನÀ ಚಲನ, ವಲನ ಮೇಲೆ ನಿಗಾ ಇಟ್ಟು ಯಾರೊಬ್ಬರೂ ಹೊರ ಹೋಗಿಬರುವುದರ ಕುರಿತುÀ ಹೆಸರು ದಾಖಲಿಸಿಕೊಳ್ಳಲು ಒಬ್ಬ ಗೇಟ್ ಕಿಪರ್ ನಿಯೋಜನೆ ಅತೀ ಅವಶ್ಯಕವಾಗಿರುತ್ತದೆ ಎಂದು ಕಲ್ಯಾಣ ಕರ್ನಾಟಕ ಸಮಾಜ ಜಾಗ್ರಣ ಮಂಚ್ ಸಂಚಾಲಕರಾದ ರಮೇಶ ಯಾಕಾಪೂರ, ಅವರು ಹೇಳಿದ್ದಾರೆ.
ವಸತಿ ನಿಲಯಗಳಲ್ಲಿ ಈ ಮಾದರಿಯ ಭದ್ರತಾ ವ್ಯವಸ್ಥೆಯಿಂದ ರಾಜ್ಯದ ಹಲವು ಕಡೆ ವಸತಿ ನಿಲಯಗಳಲಿ ವಿದ್ಯಾರ್ಥಿನಿಯರು ಕಾಣೆಯಾಗುತ್ತಿರುವ ಪ್ರಕರಣಗಳ ತಡೆಯಲು ಸಾಧ್ಯವಾಗುತ್ತದೆ.
ನಾಪತ್ತೆ ಪ್ರಕರಣದಿಂದಾಗಿ ವಿದ್ಯಾರ್ಥಿನಿಯರ ಪಾಲಕರು ಅವರ ಮಕ್ಕಳನ್ನು ವಸತಿ ನಿಲಯಗಳಲ್ಲಿ ಬಿಡಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಪ್ರತಿಯೊಂದು ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಗೇಟ್ ಕಿಪರ್ ರನ್ನು ನಿಯೋಜಿಸಲು ಜಿಲ್ಲೆ ಮತ್ತು ಆಯಾ ತಾಲ್ಲೂಕ
ಅಧಿಕಾರಿಗಳನ್ನು ಸೂಚಿಸಲು ಕಲ್ಯಾಣ ಕರ್ನಾಟಕ ಸಮಾಜ ಜಾಗ್ರಣ ಮಂಚ್ ಸಂಚಾಲಕರಾದ ರಮೇಶ ಯಾಕಾಪೂರ, ಅವರು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.