
ಶಹಾಬಾದ:ಆ.7:ಇತ್ತಿಚೇಗೆ ದೇಶ, ರಾಜ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿನಿರು ಶಾಲೆಗೆ ಬರುವಾಗ ನಿಮ್ಮನ್ನು ಯಾರು ಹಿಂಬಾಲಿಸುತ್ತಿದ್ದಾರೆ ಎಂಬುವುದನ್ನು ಗಮನಿಸಿ, ಒಬ್ಬರೆ ತಿರುಗಾಡಬೇಕಲೆ, ಅವಶ್ಯಕತೆ ಎನಿಸಿದ್ದಲ್ಲಿ ರಕ್ಷಣೆಗಾಗಿ 112ಗೆ ಕರೆ ಮಾಡಿ ಎಂದು ವಾಡಿ ಪೊಲೀಸ್ ಠಾಣೆ ಪಿಎಸ್‍ಐ ತಿರುಮಲೇಶ ಹೇಳಿದರು.
ಅವರು ರಾವೂರನ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ಪ್ರತಿನಿತ್ಯ ನಾವು ಹಲವಾರು ರಸ್ತೆ ಅಪಘಾತಗಳ ಬಗ್ಗೆ ಕೇಳುತ್ತೇವೆ, ನೋಡುತ್ತೇವೆ, ರಸ್ತೆ ಅಪಘಾತವಾಗಲು ಮುಖ್ಯ ಕಾರಣ ರಸ್ತೆ ನಿಯಮಗಳನ್ನು ಪಾಲಿಸದೆ ಇರುವದಾಗಿದೆ. ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸಿ, ಇತರರಿಗೂ ಅರಿವನ್ನು ಮೂಡಿಸಬೇಕು, ಲೈಸನ್ಸ್, ಇನ್ಸೂರೆನ್ಸ್, ಹೆಲ್ಮೇಟ್ ಇಲ್ಲದೆ ವಾಹನ ಚಲಾಯಿಸುವದು ಆಪತ್ತಿಗೆ ಅವ್ಹಾನ ನೀಡಿದಂತೆ ಅಗುತ್ತದೆ ಎಂದು ಹೇಳಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ಅವರು ಪ್ರಾಸ್ತಾವಿಕ ಮಾತನಾಡುತ್ತ ಇತ್ತಿಚೇಗೆ ಅತಿವೇಗ, ರಸ್ತೆ ನಿಯಮ ಪಾಲನೆ ಮಾಡದೆ 14 ರಿಂದ 21 ವರ್ಷದ ವಯಸ್ಸಿನ ಯುವಕರೇ ಹೆಚ್ಚು ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ, ಇದನ್ನು ತಪ್ಪಿಸಲು ರಸ್ತೆ ಸುರಕ್ಷೆತೆ ನಿಯಮ ಪಾಲಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾ ವಿಧ್ಯಾಧರ ಖಂಡಾಳ, ಶಿಕ್ಷಕರಾದ ಈಶ್ವರಗೌಡ ಪಾಟೀಲ, ಸೋಮಶೇಖರ ಬಾಳಿ, ಅನೀಲ, ಸುಗುಣಾ ಕೊಳ್ಕೂರ, ಭುವನೇಶ್ವರಿ ಎಂ.ರಾಧಾ ರಾಠೋಡ, ಮಂಜುಳಾ ಪಾಟೀಲ, ಭಾರತಿ ಪರೀಟ್, ಜ್ಯೋತಿ ತೆಗನೂರ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.