ವಿದ್ಯಾರ್ಥಿನಿಯರಿಗೆ ಗುಲಾಬಿ ಹೂ ನೀಡಿ ಮಹಿಳಾ ದಿನಾಚರಣೆ

ಕಾಗವಾಡ : ಮಾ.9:ತಾಲೂಕಿನ ಉಗಾರ ಬುದ್ರುಕ್ ಗ್ರಾಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿನಿಯರಿಗೆ ಗುಲಾಬಿ ಹೂ ನೀಡಿ ಸಿಹಿ ಹಂಚಿ ವಿನೂತನವಾಗಿ ಮಾಜಿ ಗ್ರಾಪಂ ಅಧ್ಯಕ್ಷೆ ಶೈಲಾ ಕೋಳಿ ಆಚರಿಸಿದರು.
ಬುಧವಾರ ದಿ.8 ರಂದು ಉಗಾರ ಬುದ್ರುಕ್ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ, ಜೆಇಟಿ, ಜೆಎಲ್‍ಸಿ ಮತ್ತು ಉರ್ದು ಶಾಲೆ ಮೊದಲಾದ ಶಾಲೆಗಳಿಗೆ ಶೈಲಾ ಕೋಳಿ ಹಾಗೂ ಅವರ ಸಂಗಡಿಗರು ತೆರಳಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಗುಲಾಬಿ ಹೂ ನೀಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳನ್ನು ಸಲ್ಲಿಸಿದರು.

ಈ ಸಮಯದಲ್ಲಿ ಉಗಾರ ಕೆಜಿಎಸ್ ಮುಖ್ಯೋಪಾಧ್ಯಾಯಕಿ ಎ.ಬಿ.ಕಾಮತ್, ಸುರೇಖಾ ಗಡೆನ್ನವರ, ಜಿ.ಜೆ.ಮಾಂಜರೆ, ಜೆ.ಎಲ್ ಸಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಪಕ ಆರ್ ಎಲ್ ಹೊನಮಾನೆ, ಪ್ರಾಥಮಿಕ ಶಾಲೆಯ ಶ್ರೀಮತಿ ಡಿ.ಎ.ಪಮ್ಮಣ್ಣವರ, ಉರ್ದು ಶಾಲೆಯ ಮುಖ್ಯೋಪಾಧ್ಯಾಪಕ ಅಬ್ದುಸಮ್ಮದ್ ನಸರದಿ, ಜೆಇಟಿ ಶಾಲೆಯ ಮುಖ್ಯಾಧ್ಯಾಪಕಿ ಶಾಂತಾ ಸತ್ತಿ, ಅಭಯ ದೇಸಾಯಿ, ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.