ವಿದ್ಯಾರ್ಥಿನಿಗೆ ಪ್ರಶಸ್ತಿ

ಮುನವಳ್ಳಿ,ಏ5: ಇತ್ತಿಚಿಗೆ ಬೆಂಗಳೂರಿನಲ್ಲಿ ಜರುಗಿದ 2021 ನೇ ಯೋಗೋತ್ಸವ (ಆನಲೈನ) ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ಚನ್ನಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿಧ್ಯಾಲಯದ ವಿಧ್ಯಾರ್ಥಿನಿ ಕುಮಾರಿ ಸೃಷ್ಟಿ ಮಾರುತಿ ನರೂಟಿ ಅತ್ಯುತ್ತಮ ಯೋಗ ಪ್ರದರ್ಶನದಿಂದ ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದವರು ಯೋಗ ಕಲಾ ನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ಸಾದನೆಯನ್ನು ಮೆಚ್ಚುಗೆ ಪಡಿಸಿ ಸಂಸ್ಥೆಯ ಅಧ್ಯಕ್ಷರಾದ ಮುರುಘೇಂದ್ರ ಶ್ರೀಗಳು ಕುಮಾರಿ ಸೃಷ್ಟಿಯನ್ನು ಸನ್ಮಾನಿಸಿ ಗೌರವಿಸಿದರು. ಕಾರ್ತಿಕ ಬೆಲ್ಲದ, ಪರುಶುರಾಂ ಕದಂ, ಇತರರು ಇರುವರು.