ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ : ಸಿ ಇ ಒ ಎಂ. ಪ್ರಿಯಾಂಗಾ

ಕಾರವಾರ, ಡಿ 24- ಸರ್ಕಾರದ ಆದೇಶದಂತೆ ಜನವರಿ 1 ರಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುವುದೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕಧಿಕಾರಿ ಎಮ್.ಪ್ರಿಯಾಂಗಾ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪತ್ರಿಕಾ ಗೊಷ್ಟಿ ನಡೆಸಿ ಮಾತನಾಡಿ, ರಾಜ್ಯಾದ್ಯಂತ ಜನವರಿ 1 ರಿಂದ ಸರ್ಕಾರಿ ಶಾಲೆ ಮತ್ತು ಕಾಲೇಜನ್ನು ಪುನಾರಂಭಿಸಲು ನಿರ್ಧರಿಸಲಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲಾ ಎಂದು ಹೇಳಿದರು.
ಆಸಕ್ತ ವಿದ್ಯಾರ್ಥಿಗಳು ತಮ್ಮ ಪಾಲಕರಿಂದ ನಮ್ಮ ಮಕ್ಕಳು ತರಗತಿಗೆ ಹಾಜರಾಗಲು ನಮ್ಮ ಅಭ್ಯಂತರವಿಲ್ಲವೆಂಬ ಅನುಮತಿ ಪತ್ರದೊಂದಿಗೆ ತರಗತಿಗಳಿಗೆ ಹಾಜರಾಗಬಹುದಾಗಿರುತ್ತದೆ.. ಕೇವಲ ಮೂರು ಪಿರೆಡ್‍ಗಳನ್ನು ತೆಗೆದುಕೊಳ್ಳುವ ಮೂಲಕ ಅರ್ಧ ದಿನದ ಶಾಲೆಯನ್ನು ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬೀಸಿಯುಟ ವ್ಯವಸ್ಥೆ ಇರುವುದಿಲ್ಲಾ. ಬಿಸಿರಿನ್ನು ಒದಗಿಸಲಾಗುತ್ತಿದ್ದು ವಿದ್ಯಾರ್ಥಿಗಳು ಇಚ್ಛಿಸಿದ್ದಲ್ಲಿ ತಾವೆ ತರಬಹುದಾಗಿರುತ್ತದೆ. ರೇಶನ್‍ನ್ನು ವಿದ್ಯಾರ್ಥಿಗಳ ಮನೆಗೆ ವಿತರಿಸಲಾಗುವುದು.
6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡಾ ಜನವರಿ 1 ರಿಂದ ವಿದ್ಯಾಗಮನ ಪ್ರಾರಂಭಿಸಲಾಗುತ್ತಿದ್ದು ಎಸ್,ಒ,ಪಿ ಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗುವುದು, ವಿದ್ಯಾಗಮನಕ್ಕೆ ವಿದ್ಯಾರ್ಥಿಗಳು ಹಾಜರಾಗಲು ಅನೂಕುಲವಾಗುವಂತೆ 15 ವಿದ್ಯಾರ್ಥಿಗಳಂತೆ ಒಂದೊಂದು ತಂಡಗಳನ್ನು ರಚಿಸಿಕೊಂಡು, ಪ್ರತಿ ತಂಡಕ್ಕೂ ಒಂದು ದಿನ ಬಿಟ್ಟು ಒಂದು ದಿನ ಪಾಠ ಭೋಧನೆ ಮಾಡಲಾಗುವುದು. ಪ್ರತಿ ಶಾಲಾ ಕಾಲೇಜ್‍ಗೂ ಒಂದು ಕೋಠಡಿಯನ್ನು ಐಸೋಲೆಶನ್ ಮಾಡಲಾಗುವುದು. ಇದರಿಂದ ತುರ್ತು ಸಂದಂರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಅನಕೂಲವಾಗುವುದು. ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಕ್ಯಾಂಪ್ ಮಾಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆಯಾ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಎಸ್.ಡಿ.ಎಮ್.ಸಿ (ಶಾಲಾ ಮೇಲುಸ್ತುವಾರಿ ಸಮಿತಿ) ಮುಖ್ಯಸ್ಥರಿಗೆ ತಮ್ಮ ತಮ್ಮ ಶಾಲೆ ಮತ್ತು ಕಾಲೇಜಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಪೆÇೀಷಕರು ಭಯಬೀತರಾಗದೆ ತಮ್ಮ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳಿಸಬಹುದಾಗಿರುತ್ತದೆ. ಮತ್ತು ಶಿಕ್ಷಕರು ಕೂಡಾ ನಿರ್ಭಿತರಾಗಿ ಭೋದನೆ ಮಾಡಬಹುದೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ ಹರೀಶ್ ಗಾಂವಕರ್ ಮತ್ತು ಶಿರಸಿ ಡಿ.ಡಿ.ಪಿ.ಐ ದಿವಾಕರ್ ಶೆಟ್ಟಿ ಮತ್ತು ಡಿ.ಡಿ.ಪಿ.ಯು ಎಸ್.ಎನ್.ಬಗಲಿ ಅವರು ಉಪಸ್ಥಿತರಿದ್ದರು.