ವಿದ್ಯಾರ್ಥಿಗಳ ಸ್ವಾಗತ ಬೀಳ್ಕೊಡುಗೆ

ಕಲಬುರಗಿ:ನ.21: ನಗರದ ಶ್ರೀ ವಿದ್ಯಾ ಮಹಿಳಾ ಪದವಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನಲ್ಲಿ ಸ್ವಾಗತ ಬೀಳ್ಕೊಡುಗೆ ಅಭಿನಂದನಾ ಮತ್ತು ಸಾಂಸ್ಕøತಿಕ ಸಮಾರಂಭವನ್ನು ರವಿವಾರ ಸಾಯಂಕಾಲ ಹಮ್ಮಿಕೊಳ್ಳಲಾಗಿತ್ತು.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಬಿ.ಎಸ್.ಸಿ ಮತ್ತು ಬಿ.ಕಾಂ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳಿಗೆ ಹಾಗೂ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭ, ಹಾಗೂ 2021- 22ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶ್ರೀ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾದ ವಿಶೇಷ.ಬಿ.ನಾಸಿ ಹಾಗೂ ಬಿಎಸ್ಸಿ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಕುಮಾರಿ ಮೈನಸ, ಉಷಾ, ಕಾವ್ಯ ಇವರಿಗೆ ಸನ್ಮಾನಿಸಲಾಯಿತು.

ಶ್ರೀ ಮಹಾಲಕ್ಷ್ಮಿ ಶಕ್ತಿ ಪೀಠದ ಸುಕ್ಷೇತ್ರ ಶ್ರೀನಿವಾಸ ಸರಡಗಿಯ ಶ್ರೀ ಪರಮಪೂಜ್ಯ ಸದ್ಧರ್ಮ ಶಿರೋಮಣ ಡಾ. ಅಪ್ಪಾರಾವ್‍ದೇವಿ ಮುತ್ಯ ದೀಪ ಬೆಳಗಿಸಿ ಉದ್ಘಾಟಿಸಿದರು, ಘನ ಅಧ್ಯಕ್ಷತೆಯನ್ನು ಶ್ರೀ ವಿದ್ಯಾಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಪ್ರಮೋದ್‍ಇಟ್ಟಿಗಿ, ಅಧ್ಯಕ್ಷತೆಯನ್ನು ಡಾ.ಕವಿರಾಜ ಸಿ.ಪಾಟೀಲವಹಿಸಿದ್ದರು.

ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಸಿ.ಡಿ.ಸಿ.ಸಲ್ಲಾವುದ್ದಿನ್, ಕಲಬುರಗಿಯ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರೊ.ಅರವಿಂದದ್ಯಾಮ, ಕಲಬುರಗಿವಿಶ್ವ ಹಿಂದುಕಾಲೇಜನ ಡಾ.ದರ್ಗಾಆರ್.ಐ ಹಾಗೂ ವಜ್ಜಲ್ ಮೂಖ್ಯ ಶಿಕ್ಷಕರಾದ ಈರಯ್ಯಾಎಮ್.ವಸ್ತ್ರದ ಹಾಗೂ ಕಾಲೇಜಿನ ಇನ್ನಿತರ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ವಿದ್ಯಾಕಾಲೇಜಿನ ಆಡಳಿತ ಮಂಡಳಿಯ ಪ್ರಮಿಳಾ ಬದ್ರಿ ಹಾಗೂ ಮಹೇಶ ಕರಾಜೆ ಸ್ವಾಗತಿಸಿದರು. ನಂತರವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.