ವಿದ್ಯಾರ್ಥಿಗಳ ಸ್ಮಾರ್ಟ್ ಕ್ಲಾಸ್ ಬಳಸಿಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು: ಮಾ:25: ಸಂಡೂರಿನ ಸಮಗ್ರ ಅಭಿವೃದಿಗೆ ಶ್ರಮಿಸುತ್ತಿದ್ದು ಅದರ ಪೂರ್ಣ ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿಯನ್ನು ಸಾಧಿಸಬೇಕು, 1 ಕೋಟಿ ವೆಚ್ಚದಲ್ಲಿ ಪಟ್ಟಣದ ಎಲ್.ಬಿ. ಕಾಲೋನಿಯ ಬಾಲಕೀಯ ಪದವಿಪೂರ್ವ ಕಾಲೇಜಿನ ಸ್ಮಾರ್ಟ್ ತರಗತಿಗಳನ್ನು ಲೋಕಾರ್ಪಣೆ ಮಾಡಿದ್ದು ಅವುಗಳ ಪೂರ್ಣ ಬಳಕೆಯಾಗಬೇಕು ಎಂದು ಶಾಸಕ ಈ.ತುಕರಾಂ ಕರೆನೀಡಿದರು.
ಅವರು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಪುರಸಭೆಯ 12ನೇ ವರ್ಡ ಕೋರ್ಟ ರಸ್ತೆಯಲ್ಲಿ ಡಾಂಬಿರೀಕರಣಕ್ಕಾಗಿ 70 ಲಕ್ಷ ನೀಡಿದ್ದು ಕೆಲವೇ ದಿನಗಳಲ್ಲಿ ಜನರ ಬಳಕೆಗೆ ದೊರೆಯಲಿದೆ, ಅಲ್ಲದೆ ಪಟ್ಟಣದಲ್ಲಿ ಹಾಗೂ ತಾಲೂಕಿನಾದ್ಯಂತ ಇನ್ನು ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು ಅ ಎಲ್ಲಾ ಕಾಮಗಾರಿಗಳು ನಿರಂತರವಾಗಿ ಸಾಗಲಿವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಅನಿತಾ ವಸಂತಕುಮಾರ್, ಸದಸ್ಯರಾದ ಎಲ್.ಹೆಚ್.ಶಿವಕುಮಾರ್, ಮಾಜಿ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ವಿ.ಸುರೇಶ್, ಬ್ರಹ್ಮಯ್ಯ, ಹರೀಶ್, ಕೊಂಚಿಗೇರಿ, ಕಾಲೇಜಿನ ಪ್ರಾಂಶುಪಾಲರು, ಇತರ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.

One attachment • Scanned by Gmail