ವಿದ್ಯಾರ್ಥಿಗಳ ಸ್ಮಾರ್ಟಕ್ಲಾಸ್‍ಗಾಗಿ ಸ್ಮಾರ್ಟ್‍ಟಿವಿ ಕೊಡುಗೆ ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿರಿ- ಬಿಇಒ

ಸಂಜೆವಾಣಿ ವಾರ್ತೆ
ಕುರುಗೋಡು.ಡಿ.6- ವಿದ್ಯಾರ್ಥಿಗಳು ಸರ್ಕಾರ ನೀಡುವ ಬಿಸಿಯೂಟ, ಉಚಿತಪಠ್ಯಪುಸ್ತಕ, ಬಟ್ಟೆವಿತರಣೆ, ಹಾಲು, ಹಣ್ಣು, ಸ್ಮಾರ್ಟಟಿವಿ ಸೇರಿದಂತೆ ಇತರೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವ್ರುದ್ದಿಹೊಂದಬೇಕೆಂದು ಕುರುಗೋಡು ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಅವರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ಸ್ಮಾರ್ಟಕ್ಲಾಸ್‍ಗಾಗಿ ಕಲ್ಯಾಣ-ಕರ್ನಾಟಕ ಶಿಕ್ಷಣ ಮತ್ತು ಕ್ರುಷಿ ಅಭಿವ್ರುದ್ದಿನಿಗಮ ಮಂಡಳಿವತಿಯಿಂದ ನೀಡಲಾದ ಸುಮಾರು 2.4ಲಕ್ಷ ವೆಚ್ಚದ ಸ್ಮಾರ್ಟಟಿವಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವ್ರುದ್ದಿ ದ್ರುಷ್ಟಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಕೆಲ ಸರ್ಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಇರುವುದು ದುರದ್ರುಷ್ಟಕರ ಸಂಗತಿ ಎಂದು ವಿಷಾದವ್ಯಕ್ತಪಡಿಸಿದರು.
ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎಮ್. ಲಕ್ಷಿಚಕ್ರವರ್ತಿ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಕಿ ಗುಣಮಟ್ಟ ಹೆಚ್ಚಿಸಲು ಸರ್ಕಾರದ ಈ ಯೋಜನೆ ಉಪಯುಕ್ತವಾಗಿದೆ ಎಂದು ನುಡಿದರು.
ಕುರುಗೋಡು ದೈಹಿಕಶಿಕ್ಷಾಣಧಿಕಾರಿ ಕೆ.ಎರ್ರಿಸ್ವಾಮಿ, ಶಾಲೆಯ ಎಸ್‍ಡಿಎಂಸಿ ಅದ್ಯಕ್ಷ ಕಲ್ಗುಡೆಪ್ಪ, ಎಸ್‍ಡಿಎಂಸಿ ಸದಸ್ಯ ಕುಂಬಾರುದೊಡ್ಡಪ್ಪ, ಬಸಮ್ಮ, ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಬಾಗವಹಿಸಿದ್ದರು.