ವಿದ್ಯಾರ್ಥಿಗಳ ಸಾಧನೆ

ಬಾದಾಮಿ, ಮೇ16: ತಾಲೂಕಿನ ಉಗಲವಾಟ ಗ್ರಾಮದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಶ್ರೀ ಕಾಳಿದಾಸ ಪ್ರೌಢ ಶಾಲೆಯ 2023 -24 ನೇ ಸಾಲಿನ SSಐಅ ಪರೀಕ್ಷಾ ಫಲಿತಾಂಶ ಶೇಕಡ 74.28% ರಷ್ಟು ಬಂದಿದೆ.
ನಮ್ಮ ಶಾಲೆಯ ಪರೀಕ್ಷೆಗೆ ಹಾಜರಾದವರಲ್ಲಿ 6 ವಿದ್ಯಾರ್ಥಿಗಳು ಪ್ರಥಮ, 12 ವಿದ್ಯಾರ್ಥಿಗಳು ದ್ವಿತೀಯ, ಹಾಗೂ 8 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ..
ಶಾಲೆಗೆ ಬಸಮ್ಮ ಬಗಲಿ 72%(ಪ್ರಥಮ), ಫಕೀರಪ್ಪ ಹದಗಲ್ಲ 71%(ದ್ವಿತೀಯ), ಮತ್ತು ಪ್ರೇಮಾ ಮುಚ್ಚಳಗುಡ್ಡ – 68.48% ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಎಂದು ಮುಖ್ಯಶಿಕ್ಷಕ ಬಿ.ಸಿ.ಶೇಖರಪ್ಪ ತಿಳಿಸಿದ್ದಾರೆ.
ಅಭಿನಂದನೆ: ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಬಿ.ಚಿಮ್ಮನಕಟ್ಟಿ ಕಾರ್ಯದರ್ಶಿ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಸಂಪರ್ಕಾಧಿಕಾರಿ ಶರಣಗೌಡ ಪಾಟೀಲ ಸೇರಿದಂತೆ ಸಹಶಿಕ್ಷಕರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.