
ಕಮಲಾಪೂರ: ಸೆ.10:ತಾಲೂಕೂ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ತಾಲೂಕಿನ ಕುರಿಕೋಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಖೋ-ಖೋ ಆಟದಲ್ಲಿ ಗೆದ್ದು ಪ್ರಥಮ ಸ್ಥಾನಗಳಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಗುರುಗಳಾದ ಸಂತೋಷ ಹೊಸಮನಿ ಹಾಗೂ ತರಬೇತುದಾರರಾದ ಅನೀಲ ಮಮ್ಮಾ ಅವರು ಶಾಲೆಯ ವಿಧ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳಾದ ಪ್ರವೀಣ, ಸಂದೀಪ, ಸುದೀಪ, ದಸರಂಥ, ಮುದಿನ, ಶಂಕರ, ಯಲ್ಲಾಲಿಂಗ, ಸಂತೋಷ, ಕಿರಣ,ಹಾಗೂ ಹೆಚ್ಚುವರಿ ಶ್ರೀಶೈಲ ನಭಿಸಾಬ ಮತ್ತು ಶ್ರೀಶೈಲ ಹಾಗೂ ಸಹಾಯಕರಾದ ಅಭಿಶೇಕ ಎಂ.ಕೆ, ವೇಗರಾಜ, ನಾಗರಾಜ, ಮಲ್ಲಿಕಾರ್ಜುನ ಗಣೇಶ, ಸಚೀನ,ಫಿಯ್ಯಾಜ ಸೇರಿದಂತೆ ಇತರರು ಇದ್ದರು.