ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ

ರಾಯಚೂರು,ಜು.೧೮- ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಸೇಠ್ ಚುನಿಲಾಲ್ ಅಮರಚಂದ ಬೋಹರಾ ಕಾನೂನು ಮಹಾವಿದ್ಯಾಲಯವು “ಸಾಂಸ್ಕೃತಿಕ ಸಂಭ್ರಮ ೨೦೨೨”ನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಟಾಟನಾ ಕಾರ್ಯಕ್ರಮವನ್ನು ಬೆಳಗ್ಗೆ ೧೦ ಗಂಟೆಗೆ ಉದ್ಟಾಟಕರಾದ ಬಸಪ್ಪ ತಿಪ್ಪಾರೆಡ್ಡಿ, ಉಪಾಧ್ಯಕ್ಷರು, ತಾರಾನಾಥ ಶಿಕ್ಷಣ ಸಂಸ್ಥೆ, ರಾಯಚೂರು ರವರು ಆಗಮಿಸಿ ನೇರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈ ಶ್ರೀಕಾಂತರಾವ್ ವಕೀಲರು, ಚೇರಮನ್‌ರು, ಆಡಳಿತ ಮಂಡಳಿ, ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯ ರಾಯಚೂರುರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಬಾಪತಿ ಪಾಟೀಲ್ ವಕೀಲರು ಕಾರ್ಯದರ್ಶಿಗಳು, ದ್ಯಾಸನೂರು ಮೃತ್ಯುಂಜಯ್ಯ ಸದಸ್ಯರು ಆಡಳಿತ ಮಂಡಳಿ, ಮತ್ತು ಪದ್ಮಾ.ಜೆ ಪ್ರಾಚಾರ್ಯರು ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯ ರಾಯಚೂರುರವರು ವೇದಿಕೆ ಮೇಲೆ ಉಪಸ್ಥಿತಿರಿದ್ಧರು.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಅಂಬಾಪತಿ ಪಾಟೀಲ್‌ರವರು ನೇರವೇರಿಸಿದರು. ನಿರೂಪಣೆಯನ್ನು ವಸುಂದರಾ ಬಿ. ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರು, ಸಾಂಸ್ಕೃತಿಕ ಸಮಿತಿ, ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯ, ರಾಯಚೂರುರವರು ನಿರೂಪಿಸಿದರು. ಪದ್ಮಾ .ಜೆ ಪ್ರಾಚಾರ್ಯರು ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಸ್ಪರ್ಧಾಳುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಅಂತಿಮವಾಗಿ ಸಮಾರೋಪ ಸಮಾರಂಭವನ್ನು ಸಂಜೆ ೦೪.೦೦ ಗಂಟೆಗೆ ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಂದಾಪುರ ಶ್ರೀನಿವಾಸ್‌ರಾವ್, ಪ್ರಧಾನ ಕಾರ್ಯದರ್ಶಿಗಳು, ತಾರಾನಾಥ ಶಿಕ್ಷಣ ಸಂಸ್ಥೆ, ರಾಯಚೂರು ಹಾಗೂ ಮಂಗಳಾ ವೆಂ.ನಾಯ್ಕ , ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರುರವರು ಆಗಮಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈ ಶ್ರೀಕಾಂತ್‌ರಾವ್, ವಕೀಲರು ಚೇರಮನ್‌ರು, ಆಡಳಿತ ಮಂಡಳಿ, ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯ, ರಾಯಚೂರುರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಂಬಾಪತಿ ಪಾಟೀಲ್, ವಕೀಲರು ಕಾರ್ಯದರ್ಶಿಗಳು, ಆಡಳಿತ ಮಂಡಳಿ ಮತ್ತು ಪದ್ಮಾ.ಜೆ ಪ್ರಾಚಾರ್ಯರು ಎಸ್.ಸಿ.ಎ.ಬಿ .ಕಾನೂನು ಮಹಾವಿದ್ಯಾಲಯ, ರಾಯಚೂರುರವರು ವೇದಿಕೆಯಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನವನ್ನು ಕಾರ್ಯಕ್ರಮದ ಗಣ್ಯರು ವಿತರಿಸಿದರು. ಎ.ಎಮ್.ಮಲ್ಲಿಕಾರ್ಜುನಯ್ಯ, ಸಹಾಯಕ ಪ್ರಾಧ್ಯಾಪಕರು ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಗೋಪಿನಾಥ ಕೆ ಉಪನ್ಯಾಸಕರು ನಿರೂಪಿಸಿದರು.
ವಂದರ್ನಾಣೆಯನ್ನು ವಸುಂದರಾ ಬಿ ನೇರವೇರಿಸಿದರು. ಸಮಾರೋಪ ಸಮಾರಂಭದಲ್ಲಿ ವಿವಿಧ ಕಾಲೇಜಿನ ಸ್ಪರ್ಧಾಳುಗಳು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.