ವಿದ್ಯಾರ್ಥಿಗಳ ಸಬಲೀಕರಣ ಕಾರ್ಯಾಗಾರ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ3 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಈ ಕಾರ್ಯಗಾರದ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅಕಾಡೆಮಿ ನಿರ್ದೇಶಕರಾದ ಡಾ. ಎಂ ಚಂದ್ರ ಪೂಜಾರಿ ಕಿವಿಮಾತು ಹೇಳಿದರು.

ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಅಕಾಡೆಮಿಯಿಂದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೂರು ದಿನಗಳ ವಿದ್ಯಾರ್ಥಿಗಳ ಸಬಲೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ ಬಿ ಬಾಗಡಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸರಕಾರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ತಂದಿದ್ದು ಅದರಲ್ಲಿ ಈ ಕಾರ್ಯಗಾರ ಅತ್ಯುತ್ತಮವಾದದ್ದು ಇದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಕಾಡೆಮಿಯ ಡೀನ್ ಡಾ. ಐ.ಬಿ. ಸಾತಿಹಾಳ ಅವರು ಮಾತನಾಡಿ ಕಾರ್ಯಗಾರದ ಮೂಲ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಐಕ್ಯೂಎಸಿ ಸಂಚಾಲಕರಾದ ಸಂತೋಷ್ ಹುಬ್ಬಳ್ಳಿ, ಪ್ರಸನ್ನ ಪಂಡರಿ, ಬಸವರಾಜ ಸೂಡಿ ,ಡಾ. ನಾಗರತ್ನ ಕುರುಡೇಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂತೋಷ್ ಹುಬ್ಬಳ್ಳಿ ಸ್ವಾಗತಿಸಿದರು. ಶ್ರೀಧರ್ ಲೋನಕರ್ ವಂದಿಸಿದರು.ಕುಮಾರ್ ಪ್ರವೀಣ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.