ವಿದ್ಯಾರ್ಥಿಗಳ ಸನ್ನಡತೆಗೆ ಸ್ಫೂರ್ತಿದಾಯಕ ತತ್ವಗಳಾಚರಣೆಗೆ ಬರಲಿ

ಆಳಂದ:ಫೆ.24: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಮೌಲ್ಯಗಳಂತ ಸನ್ನಡೆತೆಗೆ ಬುದ್ಧ, ಬಸವ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿವಿನ ಕನ್ನಡ ವಿಭಾಗದ ಡಾ. ಸೋಮಶೇಖರ ಅಪ್ಪುಗೇರಿ ಹೇಳಿದರು.

ತಾಲೂಕಿನ ನರೋಣಾ ಗ್ರಾಮದಲ್ಲಿನ ಅಲ್ಪಸಂಖ್ಯಾತರ ಇಲಾಖೆಯ ಮೌಲಾನಾ ಅಜಾದ ಆಂಗ್ಲಮಾಧ್ಯಮ ಮಾದರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಡಿಸಿಕೊಳ್ಳುವುದು ಇಂದಿನ ಅಗತ್ಯವಿದೆ. ಸಮಾಜಕ್ಕೆ ಉತ್ತಮ ಪ್ರಜೆಯಾಗಿ ದೇಶದ ಅಭಿವೃದ್ಧಿಯಲ್ಲಿ ತೊಡುಗುವಂತಾಗಬೇಕು. ಇಂಥ ಸನ್ನಡೆತೆಗೆ ಸ್ಫೂರ್ತಿಯಾಗಲು ಸಮ ಸಮಾಜಕ್ಕಾಗಿ ಶ್ರಮಿಸಿದ ಮಹನೀಯರ ಕುರಿತು ಅಧ್ಯಯನ ಮಾಡಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಗ್ರಾಮದ ಶ್ರೀ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವುದು ಇಂದಿನ ಅಗತ್ಯವಾಗಿದೆ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿ ಉನ್ನತ ಗುರಿ ಸಾಧಿಸಭೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಶ್ರೀನಾಥ ಎಸ್ ಚಿಟಗೋಟಿ, ಸಿಆರ್‍ಸಿ ಬಸವರಾಜ ರೋಳೆ, ಮೈನಾರಿಟಿ ತಾಲೂಕು ಅಧಿಕಾರಿ ಮೀನಾಕ್ಷಿ ಹತ್ತರಕಿ, ಆಳಂದ ಮೌಲಾನಾ ಅಜಾದ ಶಾಲೆಯ ಮುಖ್ಯ ಶಿಕ್ಷಕಿ ಕಾವ್ಯಶ್ರೀ ಕೆ. ಮೇಲಿನಕೇರಿ, ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ಸಚೀನ ಗಾಯಕವಾಡ ಮಾತನಾಡಿದರು.

ಸಿದ್ಧರಾಮ ಫುಲಾರೆ ನಿರೂಪಿಸಿದರು. ಸವಿತಾ ಮಠಪತಿ ಸ್ವಾಗತಿಸಿದರು. ಅಬ್ದುಲ್ ಸಮಹದ್ ವಂದಿಸಿದರು. ಅಂಬಿಕಾ ಡೊಂಕಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿಸಿದರು. ಅಶೋಕುಮಾರ ಧನ್ನಿ, ವೀರಣ್ಣಾ ಬಿಲಗುಂದಿ ಕಾರ್ಯಕ್ರಮ ಇತರ ಚಟುವಟಿಕೆ ನಡೆಸಿಕೊಟ್ಟರು.