ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನದ ಶಕ್ತಿ ಚೈತನ್ಯವೇ ಪ್ರೇರಣೆ: ಪ್ರೊ. ಕಾಂಬಳೆ

ಕಲಬುರಗಿ:ಡಿ.4: ಜಗತ್ತಿನ ಬದಲಾವಣೆಗೆ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನದ ಶಕ್ತಿ ಚೈತನ್ಯವೇ ಪ್ರೇರಣೆಯಾಗಿದೆ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ನಿರಂತರ ಅಧ್ಯಯನ ಪ್ರರಿಶ್ರಮದಿಂದ ಮಾತ್ರ ಡಿಟ್ಟತನದ ಸಾಧಕನಾಗಲು ಸಾದ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ವಿ. ಟಿ. ಕಾಂಬಳೆ ಅಭಿಪ್ರಾಯಪಟ್ಟರು.

ನಗರದ ನಾಗಾಂಬಿಕ ಎಂಎಸ್‍ಡಬ್ಲ್ಯೂ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು. ಸಂವಿಧಾನವೇ ದೇಶದ ಉಸಿರಾಗಿದೆ. ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣ ಹಕ್ಕ ಮತ್ತು ಮಹಿಳೆಯರನ್ನು ಗೌರವಿಸುವ ಹಕ್ಕನ್ನು ಸಂವಿಧಾನ ನಮಗೆಲ್ಲ ನೀಡಿದೆ. ಬುದ್ಧ, ಬಸವ ಡಾ. ಬಿ. ಆರ್. ಅಂಬೇಡ್ಕರ್ ತಳ ಸಮುದಾಯಗಳ ಸಬಲೀಕರಣ ಮತ್ತು ಅಭಿವೃದ್ಧಿಗೆ ಸಮಾನ ಒತ್ತು ಕೊಟ್ಟಿದ್ದಾರೆ. ಅವರ ಸಿದ್ಧಾಂತಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಯುವಕರು ಮುಂದೆ ಸಾಗಬೇಕ ಎಂದರು.

ಕಲಬುರಗಿ ನಗರ ಠಾಣೆಯ ಪಿಎಸ್‍ಐ ಶ್ರೀಮತಿ. ಯಶೋಧಾ ಕಟಕೆ ಮುಖ್ಯ ಅತಿಥಿಗಳಾಗಿ ಮಾತನಾಡಿ ನಮ್ಮ ದೇಶದ ಸಂಸ್ಕøತಿ ಶ್ರೇಷ್ಠ ಸಂಸ್ಕøತಿಯಾಗಿದೆ. ಇಲ್ಲಿನ ಸಂಸ್ಕøತಿ, ಸಾಹಿತ್ಯ ಸೇರಿದಂತೆ ವೈವಿಧ್ಯತೆಗಳ ಬಗ್ಗೆ ವಿದೇಶಿಗರು ಪ್ರಶಂಸಿಸುತ್ತದ್ದಾರೆ. ನಮ್ಮ ದೇಶದ ಶಕ್ತಿಯಾಗಿರುವ ಯುವಕರು ಅರಿತು ಅಸಾಧ್ಯವಾದುದ್ದನ್ನು ಸಾಧಿಸಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು. ಸಾಮಾಜಿಕ ಮಾಧ್ಯಮದ ಗೀಳಿನಿಂದ ಜೀವನ ಮೌಲ್ಯಗಳನ್ನು ನಿರ್ಲಕ್ಷಸದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜಕಾರ್ಯ ಪದವಿ ಪೂರೈಸಿರುವ ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ಸಮರ್ಪಣ ಮನೋಭಾವದಿಂದ ದುಡಿಯಬೇಕು. ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಬೇಕು. ಆಗ ಮಾತ್ರ ನಿಮ್ಮ ಸೇವೆಗೆ ಗೌರವ ಮತ್ತು ಕಾಲೇಜಿಗೆ ಕೀರ್ತಿ ಬರಲಿದೆ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ. ಪ್ರಿಯಾಂಕ ಮಾಡಗಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಶ್ರೀ. ಮಹೇಶ ಮಾಡಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಲಿತ ಸಂಘರ್ಷ ಸಮಿತಿ ನಗರಾಧ್ಯಕ್ಷ ಅರವಿಂದ್ ಕಮಲಾಪೂರ್ಕರ್ ಹಾಗೂ ಉಪನ್ಯಾಸಕರಾದ ಸನ್ಮತಿ ಅಂಬಲಗಿ, ಸಿದ್ದಮ್ಮ, ಹರಳಯ್ಯ, ಬೀರಲಿಂಗ ಪೂಜಾರಿ ವಿಕ್ರಂ ಗೋಕಲೆ ಉಪಸ್ಥಿತರಿದ್ದರು. ರಂಜಿತ್ ಕುಮಾರ್ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಅತಿಥಿ ಗಣ್ಯರನ್ನು ಸನ್ಮಾನಿಸಲಾಯಿತು. ಅಶ್ವಿನಿ ಮತ್ತು ದೀಪಮಾಲ ಪ್ರಾರ್ಥಿಸಿದರು, ಬಸವರಾಜು ಸ್ವಾಗತಿಸಿದರು, ಸುಧಾರಾಣಿ ವಂದಿಸಿದರು. ಗೀತ ಮತ್ತು ಆರತಿ ಕಾರ್ಯಕ್ರಮ ನಿರೂಪಿಸಿದರು.