ವಿದ್ಯಾರ್ಥಿಗಳ ವಿಕಾಸಕ್ಕೆ ಶಿಕ್ಷಕರು ಶ್ರಮ ವಹಿಸಿ-ಹಣಗಿ

ಹಾವೇರಿ, ನ 21- ನಿವೃತ್ತಿ ಬದುಕಿನ ಸಾರ್ಥಕತೆಗೆ ಸೇವಾವಧಿಯಲ್ಲಿನ ಕೆಲಸದ ತನ್ಮಯತೆ ಹಾಗೂ ತಮ್ಮ ಸಹದ್ಯೋಗಿಗಳ ಜೊತೆಗಿನ ಒಡನಾಟವೇ ಮುಖ್ಯವಾಗಲಿದೆ ಎಂದು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಭಾರಿ ಪ್ರಾಚಾರ್ಯರಾದ ಅಶೋಕ ಬಿ,ಹಣಗಿ ಹೇಳಿದರು.
ಇಲ್ಲಿನ ಇಜಾರಿಲಕಮಾಪುರದಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನ ಸ್ವೀಕರಿಸಿ ಅವರು ತಮ್ಮ ಸೇವಾನುಭವಗಳನ್ನು ಹಂಚಿಕೊಂಡರು.
ಉನ್ನತ ಹುದ್ದೆಯ ಯಶಸ್ಸು ಸಹದ್ಯೋಗಿಗಳ ಸಹಕಾರ,ವಿಶ್ವಾಸ ಹಾಗೂ ಹೊಂದಣಿಕೆಯ ಪ್ರಗತಿಪರ ಕೆಲಸಗಳ ಮೇಲೆ ನಿಂತಿದೆ. ಕರ್ತವ್ಯದಲ್ಲಿ ಪ್ರಮಾಣಿಕತೆ,ಕೆಲಸದ ತನ್ಮಯತೆ ಬಹಳ ಮುಖವಾಗಿದ್ದು,ಹುದ್ದೆಗೆ ಅನುಗುಣವಾಗಿ ಜವಾಬ್ದಾರಿಯು ಹೆಚ್ಚಾಗಿರುತ್ತದೆ.ಈ ಕಾಲೇಜಿನಲ್ಲಿ ಪ್ರತಿ ವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ. ಅಂದರೆ ಎಲ್ಲ ಉಪನ್ಯಾಸಕರ ಶ್ರಮವಾಗಿದೆ.ಸರ್ಕರಿ ಕಾಲೇಜಿನಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳು ಬರುತ್ತಿದ್ದು,ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕಾಗಿ ಈ ವೃತ್ತಿಯಲ್ಲಿ ಬಹಳ ನಿಸ್ವಾರ್ಥವಾಗಿ ಶ್ರಮವಹಿಸಬೇಕಾಗಿದೆ.ಕರ್ತವ್ಯ ನಿರ್ವಹಣೆಯಲ್ಲಿ ದೈವ ಬಲದೊಂದಿಗೆ ಎಲ್ಲರೂ ಸಹಾಯ-ಸಹಕಾರ ನೀಡಿದ್ದಿರಿ.ಕುಟುಂಬ ವರ್ಗದವರು ಸೇವೆ ಅವಧಿಯಲ್ಲಿ ಬೆಂಬಲ ಮತ್ತು ಎಲ್ಲ ರೀತಿಯ ಸಹಕಾರ ನೀಡಿ ಕೆಲಸಕ್ಕೆ ಪ್ರೋತ್ಸಾಹಕರಾಗಿದ್ದೀರಿ ಎಂದು ಅಶೋಕ ಹಣಗಿ ಅವರು ತಮ್ಮ ಸೇವಾವಧಿಯ ಹಲವಾರು ಘಟನೆ ಹಾಗೂ ಮಾರ್ಗದರ್ಶನದ ಮಾತನಾಡಿದರು.
ಕಾಲೇಜಿನ ಉಪನ್ಯಾಸಕರು ಅವರ ಸೇವೆಯನ್ನು ಸ್ಮರಿಸಿ ಅಶೋಕ ಬಿ,ಹಣಗಿ ಹಾಗೂ ಅವರ ಧರ್ಮಪತ್ನಿ ಸುವರ್ಣ ಅವರಿಗೆ ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು. ದಂಪತಿಗಳು ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು 5 ಸಾವಿರ ರೂ,ಗಳ ಚೆಕನ್ನು ಕಾಲೇಜಿಗೆ ನೀಡಿ ಅವರ ಜ್ಞಾನಪ್ರಭುತ್ವ ಉತ್ತೇಜನಕ್ಕೆ ಸಹಕಾರ ನೀಡಿದರು.ಕಾಲೇಜಿಗೆ ಆಗಮಿಸಿದ ಗಣಿತ ಉಪನ್ಯಾಸಕರಾದ ವಿಶ್ವನಾಥ ಬಿ.ಎನ್ ಅವರನ್ನು ಸ್ವಾಗತಿಸಿ ಅವರ ಕುಟುಂಬ ವರ್ಗಕ್ಕೆ ಗೌರವಿಸಲಾಯಿತು.
ಉಪನ್ಯಾಸಕರಾದ ಎನ್.ಬಿ ಪ್ರಭುಸ್ವಾಮಿಮಠ.ಮಂಜುನಾಥ ಹಟ್ಟಿ. ಪುಷ್ಪಲತಾ ಡಿ.ಎಲ್.ಶೇಕರಪ್ಪ ಅವರು ಅಶೋಕ ಹಣಗಿ ಅವರ ಸೇವೆ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪ್ರಭಾರಿ ಪ್ರಾಚಾರ್ಯರಾದ ಸಿಬಿ ಗುಡ್ಡೇರ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಗಮನ ಇಟ್ಟುಕೊಂಡು ಅವರ ಶೈಕ್ಷಣಿಕ ವಿಕಾಸಕ್ಕೆ ನಾವೆಲ್ಲರೂ ಶ್ರಮವಹಿಸೋಣ. ಅಶೋಕ ಹಣಗಿ ಅವರು ಈ ಕಾಲೇಜಿನ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಿದ್ದು,ಅವರ ನಿವೃತ್ತಿ ಬದುಕು ಸಂತೋಷಮಯವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್,ಸಿ ಮರಡಿ.ಸಿಎಂ ಕಮ್ಮಾರ,ಸುನಂಧಾ ಶಿಲಿ,ರವಿ ಸಾದರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.