ವಿದ್ಯಾರ್ಥಿಗಳ ಯಶಸ್ವಿಗೆ ತಾಯಂದಿರ ಶ್ರಮ ಅತೀ ಹಚ್ಚು ; ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಜೂ.೧೮: ಈಗಿನ ದಿನಗಳಲ್ಲಿ ಬಹಳಷ್ಟು ತಂದೆ ತಾಯಂದಿರುಗಳು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ, ಮಕ್ಕಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಹೆಚ್ಚಾಗುತ್ತಿದೆ, ಮೊದಲಿಗಿಂತ ಈಗಿನ ಬಡ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು, ವಸತಿ ಶಾಲೆಗಳಲ್ಲಿ ಓದುತ್ತಿರುವಂತ ಬಡ ವಿದ್ಯಾರ್ಥಿಗಳಿಗೆ, ಈಗ ಶಿಕ್ಷಣ ಹೆಚ್ಚಿನ ಮಟ್ಟದ ಶಕ್ತಿಯನ್ನು ತಂದು ಕೊಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ. ನಾಗಭೂಷಣ್ ರವರು ಮಕ್ಕಳಿಗೆ ಸನ್ಮಾನಿಸುತ್ತಾ ಮಾತನಾಡಿದರು.ಅವರು ಚಿತ್ರದುರ್ಗದ ರೋಟರಿ ಕ್ಲಬ್‌ವತಿಯಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು..ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಾಗ ಅವರು ಉತ್ತಮ ಸಾಧನೆ ಮಾಡಲು ಅವಕಾಶ ಸಿಗುತ್ತದೆ, ಸಂಘ ಸಂಸ್ಥೆಗಳು ಅತ್ಯುತ್ತಮ ಸಾಧನೆಮಾಡಿದಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದರಿಂದ ಹೆಚ್ಚಿನ ಮಟ್ಟದ ವಿದ್ಯಾರ್ಥಿಗಳು ಸ್ಪರ್ಧಾಮನೋಭಾವದಿಂದ, ಸೇವಾ ಮನೋಭಾವದಿಂದ, ಶಿಕ್ಷಣ ಪಡೆಯಲು ಉತ್ಸುಕರಾಗುತ್ತಾರೆ, ಅದರಲ್ಲೂ ತಾಯಂದಿರ ಪ್ರೋತ್ಸಾಹ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದರು.ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿದ ದಾನಿಗಳಾದ ಕೆ.ಎಸ್. ನಾಗೇಶ್ ತುಮಕೂರ್, ಕನಕರಾಜ್ ಪ್ರೀತಿ, ಅನುರಾಧ ವಿಶ್ವನಾಥ್, ಕೆಎಸ್ ಆನಂದ್, ಸುರೇಶ್ ಭಾಫ್ನ, ಕೆಜಿ ರಮೇಶ್, ರಂಗನಾಥ್, ಬಿ. ವಿ.ವಿಶ್ವನಾಥ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕನಕರಾಜ್, ಕಾರ್ಯದರ್ಶಿಗಳಾದ ವಿಕ್ರಂತ್, ರೋ. ವಿಶ್ವನಾಥ್ ಬಾಬು, ವೀರೇಶ್, ವೀರಭದ್ರಯ್ಯ, ಡಾ.ತಿಪ್ಪೇಸ್ವಾಮಿ, ವೀರಣ್ಣ, ಶಿವಣ್ಣ, ಹೆಗ್ಗರೆಗೌಡ, ಪ್ರೀತಿ, ಭವಾನಿ ಮುಂತಾದ ರೋಟರಿ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.