ವಿದ್ಯಾರ್ಥಿಗಳ ಬಸ ಪಾಸ ಆನ್‌ಲೈನ್ ಅರ್ಜಿ ಕೈ ಬಿಡಲು ಎಬಿವಿಪಿ ಆಗ್ರಹ

ಸುರಪುರ:ಜ.6: ತಾಲ್ಲೂಕಿನಾಧ್ಯಂತ ಕೊವೀಡ ಹಿನ್ನೆಲೆಯಲ್ಲಿ ಬಂದ ಆಗಿದ್ದ ಶಾಲೆ – ಕಾಲೇಜುಗಳು ಪುನರರಾಂಭ ಮಾಡಿ ಸರಕಾರ ಆದೇಶ ಹೊರಡಿಸಿತ್ತು.
ಅಂತೆಯೇ ಸರಕಾರದ ನಿಯಮನುಸಾರವಾಗಿ ಶಾಲೆ- ಕಾಲೇಜುಗಳು ಪ್ರಾರಂಭವಾಗಿವೆ,
ಗ್ರಾಮೀಣ ಭಾಗದಿಂದ ನಗರ ಪ್ರದೇಶದ ಶಾಲೆ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬಸ ಪಾಸ್ ನೀಡುವಲ್ಲಿ ಸರಕಾರ ಆನ್‌ಲೈನ್ ಅರ್ಜಿ ತಗೆದುಕೊಳ್ಳುತ್ತಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಆನ್‌ಲೈನ್ ಅರ್ಜಿ ಕೈ ಬಿಡುವಂತೆ ಒತ್ತಾಯಿಸಿ ಅಖಿಲ ಭಾರತಿಯ ವಿಧ್ಯಾರ್ಥಿ ಪರಿಷತ್ ಸುರಪುರ ವತಿಯಿಂದ ಈ.ಕ.ರಾ.ಸ.ಸಂಸ್ಥೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳು ಬಸ ಪಾಸ್ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಸರಕಾರ ಆದೇಶ ನೀಡಿದೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಆಧಾರ ನಂಬರ ಸಲ್ಲಿಸಬೇಕು ಆಧಾರ ನಂಬರಗೆ ಲಿಂಕ್ ಇರುವ ಮೊಬೈಲ್ ನಂಬರಗೆ ಓ.ಟಿ.ಪಿ ಕೋಡ್ ಬಂದ ಮೇಲೆ ಅರ್ಜಿ ಸ್ವೀಕರಿಸುತ್ತದೆ.
ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಧಾರ ಕಾರ್ಡಗೆ ಯಾವುದೇ ಮೊಬೈಲ್ ನಂಬರ ಲಿಂಕ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಅಲ್ಲದೆ ಆನ್‌ಲೈನ್ ಅರ್ಜಿಯಲ್ಲಿ ಅನೇಕ ತಾಂತ್ರಿಕ ಅಂಶಗಳು ಗೊಂದಲದಿಂದ ಕೂಡಿವೆ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ, ಕೊರೊನಾ ಆರ್ಥಿಕ ಸಂಕಷ್ಟದ ಮದ್ಯ ಪಾಸ್ ಅರ್ಜಿ ಸಲ್ಲಿಸಲು 100ರೂ ನಿಗದಿ ಮಾಡಿರುವುದು ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ ಇದರ ಬದಲಾಗಿ ಮೊದಲಿನಂತೆ ಅರ್ಜಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸುವಂತೆ ಎಬಿವಿಪಿ ಸಂಘಟನೆವತಿಯಿಂದ ಮನವಿ ಮಾಡಿಕೊಂಡುರು, ಒಂದು ವೇಳೆ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜ ಮಾಕಾಶಿ, ಕ್ಯಾತಪ್ಪ ಮೇಧಾ,
ಪರಶುರಾಮ ಬೈಲಕುಂಟಿ,
ಹುಲಗಪ್ಪ ಮುದ್ದನೂರ, ಬಾಲರಾಜ, ಹಣಮಂತ ಮಂಜಾಲಪುರ ಸೇರಿದಂತೆ ಇತರರಿದ್ದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಶ್ಯಕತೆ ಇದೆ ಆದರೆ ಆನ್‌ಲೈನ್ ಅರ್ಜಿ ವೇಳೆ ಆಧಾರ ನಂಬರ ಸಲ್ಲಿಸಲಾಗುತ್ತೆ ಆಧಾರಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ಲಿಂಕ ಇರಬೇಕೆಂಬ ನಿಯಮ ಮಾಡಲಾಗಿದೆ, ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಆಧಾರಗೆ ಮೊಬೈಲ್ ನಂಬರ್ ಲಿಂಕ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ, ಆದ್ದರಿಂದ ಮೊದಲಿನ ಹಾಗೆ ಅರ್ಜಿ ಸ್ವೀಕರಿಸಿ ಬಸ್ ಪಾಸ್ ವಿತರಿಸಬೇಕು.
ಡಾ॥ ಉಪೇಂದ್ರನಾಯಕ ಸುಬೇದಾರ್ ಉಪನ್ಯಾಸಕರು ಹಾಗು ಎಬಿವಿಪಿ ಕಲ್ಬುರ್ಗಿ ವಿಭಾಗದ ಸಹ ಪ್ರಮುಖರು