ವಿದ್ಯಾರ್ಥಿಗಳ ಬದುಕಿಗೆ ವಿ. ಟಿ. ಕಾಂಬ್ಳೆ ಪ್ರೇರಣೆ ಶಕ್ತಿ

ಕಲಬುರಗಿ,ಜೂ 22: ಗ್ರಂಥಾಲಯ ಕ್ಷೇತ್ರದ ಹಲವು ವಿದ್ಯಾರ್ಥಿಗಳ ಬದುಕಿಗೆ ಪ್ರೇರಣೆ ಶಕ್ತಿಯಾಗಿ ಪೆÇ್ರ. ವಿ. ಟಿ. ಕಾಂಬ್ಳೆ ಅವರು ಶ್ರಮಿಸಿದ್ದಾರೆ. ಅವರ ಜ್ಞಾನ ಮತ್ತು ಪ್ರೇರಣೆಯಿಂದ ಇಂದು ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಗುಲಬರ್ಗಾ ವಿಶ್ವಾವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅವರು ಅಭಿಪ್ರಾಯಪಟ್ಟರು. ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ವಿ. ಟಿ. ಕಾಂಬ್ಳೆ ಅವರ ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಮಾತನಾಡಿದರು. ಸಕಾಲದಲ್ಲಿ ಗುರುವಿನ ಸಲಹೆ ಮತ್ತು ಕಾರ್ಯಪ್ರವೃತ್ತಿಗಳು ವಿದ್ಯಾರ್ಥಿಗಳ ಸಾಧನೆಗೆ ಶಕ್ತಿ ಚೈತನ್ಯ ತುಂಬಲಿದೆ ಎಂದರು. ಗುಜರಾತಿನ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾದ್ಯಾಪಕ ಡಾ. ಮುತ್ತಯ್ಯ ಕೊಗನೂರ ಮಠ ಮುಖ್ಯ ಅತಿಥಿಯಾಗಿ ಮಾತನಾಡಿ ಪೆÇ್ರ. ವಿ. ಟಿ. ಕಾಂಬ್ಳೆ ಅವರು ಸಂಘಜೀವಿ ಹಾಗೂ ಭಾವನಾತ್ಮಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಸಂಶೋಧನೆಯಲ್ಲಿ ಅಗಾಧ ಸಹಕಾರ ನೀಡಿದ್ದಾರೆ ಎಂದರು. ಗುಲಬರ್ಗಾ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಸ್ಥಾಪಕ ಪೆÇ್ರ. ಎಸ್. ಆರ್. ಗುಂಜಾಳ್ ಮಾತನಾಡಿ ಗುರುವಿನ ನಿಜವಾದ ಸಾಧನೆ ಎಂದರೆ ಶಿಷ್ಯ ಸಮೂಹದ ಗುರಿ ಸಾಧನೆಯನ್ನು ಕಣ್ಣಿಂದ ನೋಡಿ ಖುಷಿಪಡುವುದು ನಿಜಕ್ಕೂ ಸಂತಸ ಹಾಗೂ ಅಭಿಮಾನವೆನಿಸಿದೆ ಎಂದರು. ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಎಸ್ ಹೊಸಮನಿ ಮಾತನಾಡಿ ಸರಳತೆಗೆ ಹೆಸರಾದ ಪೆÇ್ರ. ವಿ. ಟಿ. ಕಾಂಬಳೆ ಅವರು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವ ಮೂಲಕ ಗ್ರಂಥಾಲಯ ವೃತ್ತಿಯಲ್ಲಿನ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುವ ಸಾಮಥ್ರ್ಯವನ್ನು ಬೆಳೆಸಿದ್ದಾರೆ ಎಂದರು. ತಿರುಪತಿ ವಿಶ್ವವಿದ್ಯಾಲಯದ ಡಾ. ಚಂದ್ರನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಬೀದರ್ ನೂತನ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಿ. ಎಸ್. ಬಿರಾದಾರ ಮಾತನಾಡಿ ಗ್ರಂಥಾಲಯ ವೃತ್ತಿ ಬಗ್ಗೆ ಗೌರವ ಭಾವನೆಯಿಂದ ಕೆಲಸ ಮಾಡಿದರೆ ಸಮಾಜಮುಖಿಗೆ ಒಳಗೊಳ್ಳುವಿಕೆ ಸಾಧ್ಯವಿದೆ. ಪ್ರಸ್ತುತ ಗ್ರಂಥಾಲಯ ಶಿಕ್ಷಣ, ಅಧ್ಯಾಪನ, ಸಂಶೋಧನೆ, ಗ್ರಂಥಾಲಯ ಪ್ರಾಕ್ಟೀಸ್ ಹೆಚ್ಚು ಆಸಕ್ತಿ ಬೆಳೆಸುವ ಕ್ಷೇತ್ರವಾಗಿದೆ. ಯುವ ಸಮೂಹ ಹೆಚ್ಚು ಆಸಕ್ತಿಯಿಂದ ಪ್ರವೇಶ ಪಡೆಯುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಪೆÇ್ರ. ವಿ. ಟಿ. ಕಾಂಬಳೆ ಅವರ ಮಾರ್ಗದರ್ಶನ ಸಹಕರಿಯಾಗಲಿದೆ ಎಂದರು. ನಂತರ ಮೂರು ದಶಕಗಳ ಅವರ ಜೀವನ, ಸಾಧನೆ ಹಾಗೂ ಶೈಕ್ಷಣಿಕ ಸೇವೆಯನ್ನು ಕುರಿತ ಕಿರುಚಿತ್ರ ಪ್ರದರ್ಶಿಸಲಾಯಿತು.ಇದೇ ಸಂದರ್ಭದಲ್ಲಿ ಪೆÇ್ರ. ವಿ. ಟಿ. ಕಾಂಬಳೆ ಅವರನ್ನು ವಿಭಾಗದ ವಿದ್ಯಾರ್ಥಿಗಳು, ಕಲ್ಯಾಣ ಕರ್ನಾಟಕ ಗ್ರಂಥಾಲಯ ಸಂಘ, ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆ ಸೇರಿದಂತೆ ದೇಶ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಅಪಾರ ವಿದ್ಯಾರ್ಥಿ ಬಳಗ ಹಾಗೂ ಕುಟುಂಬದವರು ಗೌರವಿಸಿ ಸನ್ಮಾನಿಸಿದರು.