ವಿದ್ಯಾರ್ಥಿಗಳ ಪ್ರತಿಭಟನೆ

ಚಿಂಚೋಳಿ ಜ 3: ಇಲ್ಲಿನ ತಹಶೀಲ್ದಾರ ಕಾರ್ಯಾಲಯದ ಮುಂದೆ ಭಾರತೀಯ ವಿದ್ಯಾರ್ಥಿ ಮೊರ್ಚಾ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ತಾಲೂಕಿನ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಾಗೂ ಶಿಕ್ಷಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಪ್ರಮಾಣದಲ್ಲಿ ಕೊವಿಡ್-19 ಪರೀಕ್ಷಾ ಕೇಂದ್ರಗಳು ತೆರೆಯುವಂತೆ ಮತ್ತು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿಯ ಶಿರಸ್ತೇದಾರ ವೆಂಕಟೇಶ ದುಗ್ಗನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ. ಭಾರತ ಮುಕ್ತಿ ಮೋರ್ಚಾದ ಮುಖಂಡ ಮಾರುತಿ ಗಂಜಗಿರಿ. ಭಾರತೀಯ ವಿದ್ಯಾರ್ಥಿ ಮೋರ್ಚಾ ಸಂಘಟನೆಯ ತಾಲೂಕಾಧ್ಯಕ್ಷ ಮೌನೇಶ್ ಗಾರಂಪಳ್ಳಿ. ಭಾರತ ಮುಕ್ತಿ ಮೋರ್ಚಾದ ತಾಲೂಕಾಧ್ಯಕ್ಷ ಉಮೇಶ್ ದೋಟಿಕೊಳ. ಬಹುಜನ ಕ್ರಾಂತಿ ಮೊರ್ಚಾ ಮುಖಂಡ ಗೋಪಾಲ್ ಪೂಜಾರಿ ಗಾರಂಪಳ್ಳಿ. ರಾಷ್ಟ್ರೀಯ ಮೂಲನಿವಾಸಿ ಸಂಘದ ಮುಖಂಡ ರಾಜು ಬೆನೂರ್. ಉಮೇಶ್ ಹಲಗಿ. ಮತ್ತು ಭಾರತೀಯ ವಿದ್ಯಾರ್ಥಿ ಮೊರ್ಚಾ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು