ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರ;ಬಿ.ಬಿ.ಚಿಮ್ಮನಕಟ್ಟಿ

ಬಾದಾಮಿ, ಮಾ19: ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರಗತಿ ಏಳಿಗೆಯಲ್ಲಿ ಶಿಕ್ಷಕರು ತಮ್ಮ ಜೀವನವನ್ನು ಮುಡುಪಾಗಿ ಇಡುತ್ತಿದ್ದಾರೆ ಎಂದು ಮಾಜಿ ಸಚಿವ, ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಬಿ.ಚಿಮ್ಮನಕಟ್ಟಿ ಹೇಳಿದರು.
ಅವರು ಪಟ್ಟಣದ ಬನಶಂಕರಿ ರಸ್ತೆಯ ಶ್ರಿ ಕಾಳಿದಾಸ ಆಂಗ್ಲ ಮಾಧÀ್ಯಮ ಶಾಲೆಯ ಅಂಗ ಸಂಸ್ಥೆಯಾದ ಕಾಳಿದಾಸ ಮಾಂಟೆಸರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಗ್ರ್ಯಾಜುವೆಶನ್ ಸೆರಮನಿ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ, ಚಿಕ್ಕಮಕ್ಕಳ ತಜ್ಞ ಡಾ.ವಣಕಿ ಮಾತನಾಡಿ ಇಂದಿನ ಪಾಲಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶಿಸ್ತು, ಗೌರವ, ಆರೋಗ್ಯದ ಕಾಳಜಿವಹಿಸಿಕೊಂಡು ದೈನಂದಿನ ಜೀವನವನ್ನು ಸಾಗಿಸಬೇಕೆಂದು ಹೇಳಿದರು.
ಯುವಮುಖಂಡ, ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ಇಂದಿನ ಕಾರ್ಯಕ್ರಮದ ಯಶಸ್ವಿಯನ್ನು ಕಂಡು ಮುಂದಿನ ದಿನಮಾನದಲ್ಲಿ ಇಂತಹ ಕಾರ್ಯಕ್ರಮವನ್ನು ಮಾಡಲು ದೊಡ್ಡ ವೇದಿಕೆಯನ್ನು ನೀಡುವದಾಗಿ ಭರವಸೆ ನೀಡಿದರು ಮತ್ತು ಇದೇ ವೇದಿಕೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಜನರನ್ನು ಗುರುತಿಸಿ ಸನ್ಮಾನಿಸಲಾಗುವದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಪರ್ಕಾದಿ ಶರಣಗೌಡ ಪಾಟೀಲ, ರತ್ನಾಬಾಯಿ ಬಿ.ಚಿಮ್ಮನಕಟ್ಟಿ, ರೋಹಿಣಿ ಬಿ.ಚಿಮ್ಮನಕಟ್ಟಿ ಹಾಜರಿದ್ದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.