
ಕಲಬುರಗಿ:ಸೆ.6: ವಿದ್ಯಾರ್ಥಿಗಳ ಜೀವನದಲ್ಲಿ ಅಕ್ಷರ ಕಲಿಸುವ ಗುರುಗಳೇ ಮಾರ್ಗದರ್ಶಕರಾಗಿರುತ್ತಾರೆ.ಅವರು ನೀಡುವ ವಿದ್ಯಾರ್ಜನೆ ಬದುಕು ಬದಲಿಸುತ್ತದೆ ಎಂದು ಹಿರಿಯ ಮಕ್ಕಳ ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕøತ ಎ.ಕೆ.ರಾಮೇಶ್ವರ ತಿಳಿಸಿದರು.
ಜಯನಗರ ಶಿವಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಳವಾರ ಸಂಜೆ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮಗುವಿಗೆ ತಾಯಿ ಮಾತನಾಡಲು ಕಲಿಸಿದರೆ, ಶಿಕ್ಷಕ ಓದಲು ಬರೆಯುವುದರ ಜೊತೆಗೆ ಶಿಸ್ತು ಕಲಿಸುತ್ತಾರೆ.ಗುರುಗಳು ಕಲಿಸಿದ ವಿದ್ಯೆಗೆ ಬೆಲೆ ಕಟ್ಟಲಾಗದು ಎಂದು ನುಡಿದರು
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕದ ಜೊತೆಗೆ ಅರ್ಥಪೂರ್ಣ ಆಚರಣೆಗಳು ಮಾಡುವುದು ಟ್ರಸ್ಟ್ ಉದ್ದೇಶವಾಗಿದೆ ಎಂದರು.ಸಾಹಿತಿ,ಕಲಾವಿದ ಸಿ.ಎಸ್.ಮಾಲಿಪಾಟೀಲ ಮಾತನಾಡಿದರು.
ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರಾದ ಪದ್ಮಾವತಿ ಜೋಶಿ, ಟೀಕಮ್ಮ ಮಾಲಿಬೀರಾದಾರ, ಸರಸ್ವತಿ ಆನಂದ ಆಲ್ಮಿಕರ್, ಪಾರ್ವತಿ ಭೀಮಾಶಂಕರ ಶೆಟ್ಟಿ, ಪಾರ್ವತಿ ರಠಕಲ ಮತ್ತು ಶಿಕ್ಷಕ ಶಿವಕುಮಾರ ಸಿದ್ರಾಮಪ್ಪ ಜಯಪ್ಪ ಇವರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ನಿರೂಪಿಸಿದರು.ಉಪಾಧ್ಯಕ್ಷ ವೀರೇಶ ದಂಡೋತಿ ವಂದಿಸಿದರು.ಶಿವಪುತ್ರಪ್ಪ ಮರಡಿ, ಬಂಡಪ್ಪ ಕೇಸೂರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಬಸವರಾಜ ಅನ್ವರಕರ, ಮನೋಹರ ಬಡಶೇಷಿ, ಭೀಮಾಶಂಕರ ಶೆಟ್ಟಿ,ಟಿ.ಸಿ.ಚವ್ವಾಣ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ, ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ವಿಜಯಾ ದಂಡೋತಿ, ಲತಾ ತುಪ್ಪದ ಸೇರಿದಂತೆ ಬಡಾವಣೆಯ ಹಿರಿಯರು ಮಹಿಳೆಯರು ಭಾಗವಹಿಸಿದ್ದರು.