ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ : ಖಾಸಗಿ ಶಾಲೆಯ ಬಸ್ ಚಾಲಕ

ಲಿಂಗಸುಗೂರ.ಆ.೦೪- ತಾಲೂಕಿನ ಸುರಿದ ಬಾರಿ ಮಳೆಯಿಂದಾಗಿ ಲಿಂಗಸುಗೂರ ಚಿತ್ತಾಪುರ ರಸ್ತೆಯ ಬೆಂಡೋಣಿ ಹಳ್ಳವು ತುಂಬಿ ಹರಿಯುತ್ತಿದ್ದು ನಿನ್ನೆ ಸಂಜೆ ೪.೩೦ ಗಂಟೆಗೆ ಸಂಜೀವ್ ಪಬ್ಲಿಕ್ ಶಾಲೆಯ ವಾಹನ ಲಿಂಗಸುಗೂರ ನಿಂದ ಸುಮಾರು ೩೦ ರಿಂದ ೩೫ ಜನ ವಿದ್ಯಾರ್ಥಿಗಳು ಇರುವ ವಾಹನವನ್ನು ಬೆಂಡೋಣಿ ರಸ್ತೆಯಲ್ಲಿರುವ ಹಳ್ಳದಲ್ಲಿ ಸುಮಾರು ೨ ರಿಂದ ೩ ಅಡಿ ನೀರು ಹರಿಯುತ್ತಿರುವ ಹಳ್ಳದ ಸೇತುವೆ ಮೇಲೆ ಖಾಸಗಿ ಶಾಲೆಯ ವಾಹನ ಚಾಲಕ ಸುಮಾರು ೩೫ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ದು ಇಂತಹ ದುಸ್ಸಾಸಹಕ್ಕೆ ಕೈ ಹಾಕಿದ್ದು ಖಾಸಗಿ ಶಾಲೆಯ ಬಸ್ ಚಾಲಕ ಮೇಲೆ ಹಾಗೂ ಶಾಲೆಯ ಆಡಳಿತ ಮಂಡಳಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷರಾದ ಶಿವಪುತ್ರ ಗೌಡ ನಂದಿಹಾಳ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರು ಕಾದು ನೋಡ ಬೇಕಾಗಿದೆ ಎಂದು ವರದಿಗಾರರಿಗೆ ಮಾಹಿತಿಯನ್ನು ನೀಡಿದರು.