ವಿದ್ಯಾರ್ಥಿಗಳ ಕ್ರಿಯಾಶೀಲತೆ ಸ್ಕೌಟ್ಸ್ ಪೂರಕ

ರಾಯಚೂರು,ಫೆ.೨೪- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುತ್ತದೆ, ಜೊತೆಗೆ ಉತ್ತಮ ಆದರ್ಶ ಮೌಲ್ಯಗಳನ್ನು ತುಂಬುತ್ತದೆಯೆಂದು ಹೋಲಿ ಫ್ಯಾಮಿಲಿ ಶಾಲೆಯ ಅಧ್ಯಕ್ಷ ಜ್ಞಾನಪ್ರಕಾಶಂ ಹೇಳಿದರು.
ಅವರು ನಗರದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಚಿಂತನಾ ಹಾಗೂ ವಿಶ್ವ ಭಾತೃತ್ವ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಮಾತನಾಡಿ ಲಾರ್ಡ ಬೆಡನ್ ಪಾವೆಲ್ ಅವರ ಜೀವನ ಸಾಧನೆಗಳನ್ನು ತಿಳಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಸಾಮರಸ್ಯ, ಸೌಹಾರ್ದತೆಯ ಜೀವನ ನಡೆಸುವುದನ್ನು ತಿಳಿಸುತ್ತದೆ ಎಂದರು.
ಹೋಲಿ ಫ್ಯಾಮಿಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮಹೆಬೂಬ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ ಮೇಡಂ, ಸ್ಕೌಟ್ ಮಾಸ್ಟರ್ ಕಲ್ಯಾಣಕುಮಾರ್, ಗೈಡ್ ಕ್ಯಾಪ್ಟನ್ ವಿಶಾಲಾಕ್ಷಿ ಉಪಸ್ಥಿತರಿದ್ದರು.