
ಚಿತ್ರದುರ್ಗ: ವಿದ್ಯಾರ್ಥಿಗಳ ಕಲಿಕೆಗೆ ತಂತ್ರಜ್ಞಾನ ಆಧಾರಿತ ಬೋಧನೆ ಅಗತ್ಯ ಎಂದು ಡಯಟ್ ಉಪನ್ಯಾಸಕ ಕೆ.ಜಿ.ಪ್ರಶಾಂತ್ ಹೇಳಿದರು. ಹೊಸದುರ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಹಾಗೂ ತಾಲೂಕಿನ ಲಕ್ಕಿಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿ ಖಿಂಐP ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಸಿದ್ಧಗೊಳಿಸಲು ಶಿಕ್ಷಕರು ತಂತ್ರಜ್ಞಾನ ಬಳಸಿ ಬೋಧಿಸಬೇಕು. ಜ್ಞಾನದ ವಿಸ್ತರಣೆಗೆ ತಂತ್ರಜ್ಞಾನ ಆಧಾರಿತ ಕಲಿಕೆ ನೆರವಾಗುತ್ತದೆ ಎಂದರು. ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳು ಆಳವಾದ ವಿಷಯ ಜ್ಞಾನ ಪಡೆಯಲು ನೆರವಾಗುತ್ತವೆ. ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ ಟ್ಯಾಲ್ಪ್ (ಖಿಂಐP- ಖಿಇಅಊಓIಅಂಐ ಂSSISಖಿಇಆ ಐಇಂಖಓIಓಉ Pಖಔಉಖಂಒಒಇ) ಬುನಾದಿ ತರಬೇತಿಯನ್ನು, ಗಣಿತ ಮತ್ತು ವಿಜ್ಞಾನ ವಿಷಯ ಬೋಧಕರಿಗೆ ಪುನಶ್ಚೇತನ ತರಬೇತಿ ನೀಡಲಾಗಿದೆ. ಶಿಕ್ಷಕರು ಪಠ್ಯ ವಿಷಯಕ್ಕೆ ಪೂರಕವಾಗಿ ತಾಂತ್ರಿಕ ಪರಿಕರಗಳನ್ನು ಬಳಸಿ ಚಿತ್ರಗಳು, ವಿಡಿಯೋಗಳನ್ನು ಬಳಸಿ ಬೋಧಿಸುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಓದಿಗೆ ಪೂರಕವಾಗಿ ಬಳಸಿಕೊಳ್ಳುವಂತೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.ಶಿಕ್ಷಣ ಸಂಯೋಜಕ ಚಂದ್ರಶೇಖರ್, ಲಕ್ಕಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ದಿನೇಶ್, ಬಿ.ಆರ್.ಪಿ ರುದ್ರೇಶ್, ಹೊಸದುರ್ಗ ನಗರದ ಜಿ.ಜೆ.ಸಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀಧರ ಶೆಟ್ರು, ತಿಮ್ಮಪ್ಪ ಮತ್ತಿತರರಿದ್ದರು.