ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ, ಸೆ18: ಐಐಟಿ, ಐಐಐಟಿ ಹಾಗೂ ಎನ್‍ಐಟಿ ಗಳಲ್ಲಿ ಪದವಿ ಪ್ರವೇಶಕ್ಕೆ ನಡೆಸಲಾಗುವ ಜೆಇಇ ಪೂರ್ವಭಾವಿ ಪರೀಕ್ಷೆಯಲ್ಲಿ ಧಾರವಾಡದ ಅರ್ಜುನ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದಿದ್ದಾರೆ.
ಪರೀಕ್ಷೆಯಲ್ಲಿ ನಮನ್ ಭಟ್ ಭಾರತ ಮಟ್ಟದಲ್ಲಿ 7780ನೇ ರ್ಯಾಂಕ್, ಆದಿತ್ಯ ಭಟ್ ಭಾರತ ಮಟ್ಟದಲ್ಲಿ 10076 ನೇ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.