ವಿದ್ಯಾರ್ಥಿಗಳ ಆಯ್ಕೆ

ಮೂಡಲಗಿ,ಡಿ25:: ಯಾದವಾಡದಲ್ಲಿ ದಾಲ್ಮಿಯಾ ಭಾರತಫೌಂಢೇಶನ ಮತ್ತು ಸಾಮ್ರಾಟ್ ಐಟಿಐ ಕಾಲೇಜು ಆಶ್ರಯದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಜರುಗಿತು.
ಕ್ಯಾಂಪಸದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಗಿರೀಶ ಮತ್ತಿಕೋಪ್ಪ ಅವರು ಮಾತನಾಡಿ, ವೇಗಾ ಸಂಸ್ಥೆಯ ಕೆಲಸದ ಮಾಹಿತಿ ವಿವರಿಸಿದರು.
ದಾಲ್ಮಿಯಾ ಆರತಫೌಂಢೇಶನ ಹಿರಿಯ ಕಾರ್ಯಕ್ರಮಾಧಿಕಾರಿ ಚೇತನ ವಾಘಮೋರೆ ಮಾತನಾಡಿ, ಕೆಲಸದಲಿನ ಶಿಸ್ತು ಹಾಗೂ ಕೆಲಸ ಪಡೆಯುವಲ್ಲಿ ವೈಯಕ್ತಿಕ ಸಾಮಥ್ರ್ಯದ ಕುರಿತು ವಿವರಸಿದರು.
ಕಾರ್ಯಕ್ರಮದಲ್ಲಿ ಡಿಒಐ ಫೌಂಢೇಶನ ಉದ್ಯೋಗ(ಪ್ಲೇಸಮೆಂಟ್)ಅಧಿಕಾರಿ ವಿನಯ ಹಾಗೂ ಸಮ್ರಾಟ ಐಟಿಐ ಕಾಲೇಜು ಪ್ರಾಂಶುಪಾಲ ಜಾಧವ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಕ್ಯಾಂಪಸ ಸಂದರ್ಶನದಲ್ಲಿ ಸೂಮಾರು 48 ವಿದ್ಯಾರ್ಥಿಗಳು ವೇಗಾ ಸಂಸ್ಥೆಗೆ ಆಯ್ಕೆಗೊಂಡರು.