ವಿದ್ಯಾರ್ಥಿಗಳ ಆತ್ಮ ವಿಶ್ವಾಸ ಹೆಚ್ಚಿಸಲು ಶಿಕ್ಷಕರಿಗೆ  ತರಬೇತಿ ಅಗತ್ಯ : ಕರಣಂ  


ಸಂಜೆವಾಣಿ ವಾರ್ತೆ
ಕುಕನೂರು, ಆ.09:  ಇಂದಿನ ದಿನಗಳಲ್ಲಿ ಶಿಕ್ಷಕರಿಗೆ ಅನ್ವೇಷಣೆ, ಸಂಶೋಧನೆ ಗುಣಗಳ ಮಾಹಿತಿ ಪಡೆದು ಮಕ್ಕಳಿಗೆ ಉಪಯುಕ್ತ ಬೋಧನೆಗೆ ಮುಂದಾಗುವುದು ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ಕರಣಂ ಹೇಳಿದರು. ಅವರು ತಾಲೂಕಿನ ತಳಕಲ್ ಅಲ್ಪಸಂಖ್ಯಾತರ ಮೂರಾಜಿ೯ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಏಕಸ್ ಪ್ರತಿಷ್ಠಾನ , ಆಗಸ್ತ್ಯ ಅಂತರ್ ರಾಷ್ಟ್ರೀಯ ಪ್ರತಿಷ್ಠಾನ ಕೊಪ್ಪಳ ಹಾಗೂ ಸಾವ೯ಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ  ಎರಡು ದಿನಗಳ ಶಿಕ್ಷಕರ ತರಬೇತಿ ಕಾಯ೯ಗಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಮೂಡಿಸುವ ಸಲುವಾಗಿ  ಸೃಜನ ಶೀಲತೆ ,ಕುತೂಹಲ, ಆಸಕ್ತಿ ಮೂಡಿಸುವಂತೆ ಬೋಧನೆ ಅಗತ್ಯವಿದೆ. ಇದರಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚುತ್ತದೆ, i ರೀತಿಯ ಕಾಳಜಿಯಿಂದ ಕಾಯಾ ೯ಗಾರ ಶಿಕ್ಷಕರಿಗೆ ಶಕಾರಿ ಎಂದು ನುಡಿದರು. ಬೀ ಆರ್ ಸಿ ಸಂಯೋಜಕ ಅಶೋಕ್ ಗೌಡರ, ಇಸಿಯೋ ಸಂಗನಗೌಡ, ಮೂರಾಜಿ೯ ದೇಸಾಯಿ ವಸತಿ ಶಾಲೆಯ ಶಿ ಕ್ಷಕರಾದ ಮಂಜುನಾಥ್, ಕವಿತಾ, ಎಕಸ್ ಕಂಪನಿಯ  ವ್ಯವಸ್ಥಾಪಕ ವೆಂಕಟೇಶ್ ದೇಶಪಾಂಡೆ, ತಲಕಲ್ ಸಿ.ಅರ್.ಪೀ ಮಂಜುನಾಥ್ ಮಟ್ಟಿ, ಫೌಂಡೇಶನ್ ಮುಖ್ಯಸ್ಥ ಪುಂದಲಿಕಪ್ಪ ಮೂಲಿಮನಿ, ಈರಣ್ಣ ಗೊಸಾವಿ, ಅನಿಲ್ ಕಾತರಕಿ, ಸೋಮನಾಥ್ ,ರವಿ ಇತರರು ಇದ್ದರು. ನಂತರ ಎರಡು ದಿನಗಳ ವರೆಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆದವು.

One attachment • Scanned by Gmail