ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಸಿನ ಸೌಕರ್ಯಕ್ಕಾಗಿ ಮನವಿ

ಬೀದರ:ಆ.5: ಮನ್ನಳ್ಳಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕಾಗುತ್ತದೆ ಹಾಗೂ ಗ್ರಾಮದ ಬಡ ರೈತರೂ ಸಹ ರೈತೋತ್ಪನ್ನಗಳು ಹಾಗೂ ಇತರೆ ಕೃಷಿ ಯಂತ್ರೋಪಕರಣ ಖರೀದಿಗೆ ಬೀದರಕ್ಕೆ ಆಗಮಿಸಿ ಪುನಃ ಕೃಷಿ ಚಟುವಟಿಕೆಗಳಿಗೆ ಹೊಲಗದ್ದೆಗಳಿಗೆ ಹೋಗಬೇಕಾಗುತ್ತದೆ, ಆದರೆ ಬೆಳಿಗ್ಗೆ ಸಮಯದಲ್ಲಿ ಸಮರ್ಪಕ ಬಸ್ಸಿನ ಸೌಕರ್ಯ ಇಲ್ಲದಿರುವುದರಿಂದ ವಿದ್ಯರ್ಥೀಗಳು ವಿದ್ಯಾಭ್ಯಾಸದಿಂದ ವಂಚಿತರಾಗುತದ್ದಾರೆ ಹಾಗೂ ರೈತರು ಆರ್ಥಿಕ ನಷ್ಟ ಎದುರಿಸುತಿದ್ದಾರೆ. ಸಧ್ಯ ಚಿಂಚೋಳಿ-ಬೇಮಳಖೆಡಾ-ಭಂಗೂರ ಮನ್ನಳ್ಳಿ ಮುಖಾಂತರವಾಗಿ ಬರುತಿದ್ದು, ಈ ಬಸ್ಸಿನಲ್ಲಿ ಸಂಪೂರ್ಣ ಪ್ರಯಾಣಿಕರಿರುವುದರಿಂದ ಬಸ್ಸು ನಿಲ್ಲಿಸುತ್ತಿಲ್ಲ ಹಾಗೂ ವಿದ್ಯಾರ್ಥೀಗಳು ಹಾಗೂ ವೃದ್ಧ ರೈತರು ಬಸ್ಸಿನಲ್ಲಿ ಸಂಚಾರ ಮಾಡಲು ಆಗುವುದಿಲ್ಲ.

ಮನ್ನಳ್ಳಿ ಗ್ರಾಮದಿಂದ ಪ್ರತ್ಯೇಕ ಒಂದು ಬಸ್ಸನ್ನು ಬೆಳಿಗ್ಗೆ 7:30 ಗಂಟೆಗೆ ಸಂಚಾರ ಒದಗಿಸಿ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಅನುಕೂಲ ಆದಷ್ಟೂ ಬೇಗನೆ ಮಾಡಬೇಕಾಗಿ ಮನ್ನಳ್ಳಿ ಗ್ರಾಮದ ವಿದ್ಯಾರ್ಥಿಗಳಾದ ರಾಕೇಶ, ಆಗಸ್ಟೀನ್ ಕೋಟೆ ಮತ್ತು ಯೋಹಾನ ಪ್ರಕಾಶ ವಿಭಾಗೀಯ ನಿಯಂತ್ರಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.