ವಿದ್ಯಾರ್ಥಿಗಳೊಟ್ಟಿಗೆ ಯೋಗ ಮಾಡಿದ ಚಾ.ನಗರ ಡಿಸಿ

ಚಾಮರಾಜನಗರ, ಜೂ.21:- ಪ್ರಕೃತಿ ಜೊತೆ ನಿರಂತರ ಸಂಪರ್ಕ ಸಾಧಿಸಬೇಕಾದರೇ ಯೋಗ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ರಮೇಶ್ ಎಂದು ತಿಳಿಸಿದರು.
ಅವರು ನಗರದ ಚಾಮರಾಜನಗರ ಜಿಲ್ಲಾಡಳಿತವು ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಜೊತೆಗೂಡಿ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದ 9 ನೇ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಔಷಧಿಗಳು ಸರಿಪಡಿಸಲಾಗದ ಕಾಯಿಲೆಗಳನ್ನು ಯೋಗ ಗುಣಪಡಿಸಿದೆ, ಯೋಗ, ಧ್ಯಾನದ ಮೂಲಕ ಮಾನಸಿಕ ಶಾಂತಿ ಮಾತ್ರವಲ್ಲ- ಸಮಾಜದ ಶಾಂತಿಯನ್ನೂ ಕಾಪಾಡಬಹುದು ಎಂದು ಅಭಿಪ್ರಾಯಪಟ್ಟರು.
50ಕ್ಕೂ ಹೆಚ್ಚು ನುರಿತ ಯೋಗಪಟುಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶ್ವಾಸಕ್ರಿಯೆ, ಅರ್ಧ ಉಷ್ಟಾಸನ, ತ್ರಿಕೋನಾಸನ, ವಜ್ರಾಸನ, ವೀರಾಸನ,ತ್ರಿಕೋನಾಲಗಸನ, ಮಂಡೂಕಾಸನ, ಸೂರ್ಯ ನಮಸ್ಕಾರ ಸೇರಿದಂತೆ 2 ತಾಸು ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕ ಪುಟ್ಟರಂಗಶೆಟ್ಟಿ, ನಗರಸಭೆ ಜನಪ್ರತಿನಿಧಿಗಳು ಗೈರಾಗಿದ್ದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಡಿಸಿ ಕಾತ್ಯಾಯಿನಿದೇವಿ, ನಗರಸಭೆ ಆಯುಕ್ತ ರಾಮದಾಸ್ ಸೇರಿದಂತೆ ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.