ವಿದ್ಯಾರ್ಥಿಗಳೊಂದಿಗೆ ಡಿವಿಪಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ15. ಗ್ರಾಮದ 4 ಹೈಸ್ಕೂಲ್‍ಗಳ 8 ಮತ್ತು 9ನೇ ತರಗತಿ ನೂರಾರು ವಿದ್ಯಾರ್ಥಿಗಳೊಂದಿಗೆ, ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಆಚರಿಸಲಾಯಿತು. ಸ್ಥಳೀಯ ಗ್ರಾಮಾಡಳಿತ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಬಿ.ರುದ್ರೇಶ ಪೂಜೆ ನೆರವೇರಿಸಿದರು. 2 ಸರ್ಕಾರಿ ಪ್ರೌಢಶಾಲೆಗಳ ಮತ್ತು ಜೆಎಚ್‍ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಪಠಿಸಿದರು. ದೈಹಿಕ ಶಿಕ್ಷಕರಾದ ಕೃಷ್ಣಮೂರ್ತಿ ಸಂವಿಧಾನ ಪೀಠಿಕೆ ಬೋದಿಸಿದರು. ನಂತರ ಮುಖ್ಯಗರು ಕೆ.ವೀರಪ್ಪ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ಅವಶ್ಯವಾಗಿದೆ. ನಮ್ಮ ದೇಶ ಸದೃಢ ಸಂವಿಧಾನ ಹೊಂದಿದೆ. ಹೆಚ್ಚಿನ ಯುವಕರು ಸಂವಿಧಾನದ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು. ಗ್ರಾ.ಪಂ.ಪಿಡಿಓ ಯು.ರಾಮಪ್ಪ ಮಾತನಾಡಿ ಇಡೀ ಜಗತ್ತಿಗೆ ಹೋಲಿಸಿದರೆ ನಮ್ಮ ದೇಶವು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿ ಇತರೆ ದೇಶಗಳಿಗೆ ಮಾದರಿಯಾಗಿದೆ. ಸಂವಿಧಾನದ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಓದಬೇಕು. ಅರಿಯಬೇಕು ಅದಕ್ಕೆ ಬದ್ಧರಾಗಿ ನಡೆಯಬೇಕು ವಿದ್ಯಾರ್ಥಿಗಳು ಈಗಿನಿಂದ ಸಂವಿಧಾನದ ಅಂಶಗಳನ್ನು ಓದಿ ಅರಿತುಕೊಳ್ಳಬೇಕೆಂದು ತಿಳಿಸಿದರು. ಡಿವಿಪಿ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣಭಂಡಾರಿ ಸಂವಿಧಾನವನ್ನು ಓದುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿ 4 ಶಾಲೆಗಳ ಮುಖ್ಯಗುರುಗಳಿಗೆ ಸಂವಿಧಾನ ಓದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯಗುರು ಓಂಕಾರಗೌಡ, ಜೆಎಚ್‍ವಿ ಶಾಲೆ ಮುಖ್ಯಗುರು ವಿರುಪಾಕ್ಷಗೌಡ, ಗ್ರಾ.ಪಂ.ಸದಸ್ಯ ಅರಿಕೇರಿಹನುಮಂತಪ್ಪ, ಸಂಘಟನೆ ಮುಖಂಡರಾದ ವಿ.ಹನುಮೇಶ, ಎನ್.ಶ್ರೀರಾಮ, ಎಚ್.ಉಮೇಶ, ಸಂತೋಷ, ಸಹ ಶಿಕ್ಷಕರಾದ ಮೊಹಮ್ಮದ್‍ಖಾಸಿಂ, ಜ್ಯೋತಿ, ಅನ್ನಿವೇಲು, ವಿಶಾಲಮ್ಮ, ರಂಜಿತ್‍ಕುಮಾರ್, ಅತಿಥಿ ಶಿಕ್ಷಕರು ಹಾಗೂ ಪಂಚಾಯಿತಿ ಸಿಬ್ಬಂದಿ ಬಿ.ರುದ್ರೇಶ, ಫಯಾಜ್, ಎಚ್.ಹುಲುಗಪ್ಪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.