ವಿದ್ಯಾರ್ಥಿಗಳೇ ಭಾರತ ದೇಶ ಭವಿಷ್ಯದ ಆಸ್ತಿ 

ಸಂಜೆವಾಣಿ ವಾರ್ತೆ

ಜಗಳೂರು.ಫೆ.೯ :- ವಿದ್ಯಾರ್ಥಿಗಳು ಭವಿಷ್ಯ ದಲ್ಲಿ ದೇಶಕ್ಕೆ ಆಸ್ತಿಯಾಗಿದ್ದು.ಪೋಷಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಕೊಡಿಸಿ ಉಜ್ವಲ ಭವಿಷ್ಯರೂಪಿಸಬೇಕುಎಂದು ಬಿಇಓ ಹಾಲ ಮೂರ್ತಿ ಕಿವಿಮಾತು ಹೇಳಿದರು.ತಾಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿ ಕೋತ್ಸವ ಕಾರ್ಯಕ್ರಮ ತಾಲೂಕಿನ ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.ಇದರಿಂದ ಮಕ್ಕಳ ಸುಪ್ತ ಪ್ರತಿಭೆಯ ಅನಾವರ ಣಕ್ಕೆ ಸೂಕ್ತ ವೇದಿಕೆಯಾಗಿದೆ.ಶಿಕ್ಷಕರು ಮಕ್ಕಳ ಉತ್ತಮ‌ಕಲಿಕೆಗೆ ಪರಿಶ್ರಮವಹಿಸಬೇಕು.ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಸರ್ವರೂ ಕೈಜೋಡಿಸಬೇಕು ಎಂದು ಕರೆ ನೀಡಿದರು‌.ದಾವಣಗೆರೆ ಡಯಟ್ ಉಪನ್ಯಾಸಕ ಗೋವಿಂದ ರಾಜ್ ಶೆಟ್ಟಿ ಮಾತನಾಡಿ,ಮಕ್ಕಳ ಪ್ರತಿಭೆ ಪ್ರೊತ್ಸಾಹಿಸುವ ಜೊತೆಗೆ ಶಿಕ್ಷಕರ ಸೃಜ ನಶೀಲ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ.ಗ್ರಾ ಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯಕ,ಶಿಕ್ಷಣ ಉದ್ಯೋ ಗಕ್ಕೆ ಸೀಮಿತ ಎಂಬ ಭಾವನೆ ಬದಲಾಗಿ,ಜೀವನಕ್ಕೆ ಅನ್ವಯ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕಿದೆ’ ಅಭಿಪ್ರಾಯ ವ್ಯಕ್ತ ಪಡಿಸಿದರು.ಬಿಆರ್ ಸಿ ಡಿಡಿ ಹಾಲಪ್ಪ ಮಾತನಾಡಿ,ಶಿಕ್ಷಕರ ಕರ್ತವ್ಯ ನಿಷ್ಠೆ,ಪರಿ ಶ್ರಮ,ಸೇವಾ ಮನೊಭಾವದಿಂದ ಸರ್ಕಾರಿ ಶಾಲೆಯಲ್ಲಿ ಭೌತಿಕ ಹಾಗೂ ಶೈಕ್ಷಣಿಕ ಪರಿಸರ ಸುಂದರವಾಗಿ ನಿರ್ಮಾಣಗೊಳ್ಳಲು ಕಾರ ಣೀಭೂತರಾಗಿರುವ ಕಳೆದ ವರ್ಷದಲ್ಲಿ ಜಿಲ್ಲಾ ಶಿಕ್ಷಕರ ಪ್ರಶಸ್ತಿ ಗೆ ಭಾಜನರಾದ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಶಶಿ ಕಲಾ ಅವರನ್ನು ಗುರುತಿಸಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸುತ್ತಿರು ವುದು ಶ್ಲಾಘನೀಯ ಎಂದರು.ಪತ್ರಕರ್ತ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತ ನಾಡಿ,’ಗ್ರಾಮೀಣ ಭಾಗದಲ್ಲಿ ಕೇವಲ ನಾಡಹಬ್ಬ,ದೇವತೆಗಳ ಜಾತ್ರೆಗಳಲ್ಲದೆ ಶೈಕ್ಷಣಿಕ ಹಬ್ಬಗಳನ್ನು ಆಚರಿಸಬೇಕು.ವಿದ್ಯಾರ್ಥಿ ಜೀವನದಿಂದಲೇ ವೈಚಾರಿಕ ದೃಷ್ಠಿಕೋನ ಮೈಗೂಡಿಸಿಕೊಳ್ಳಬೇಕು .ದೇಶದ ಎಲ್ಲಾ ವರ್ಗದವರಿಗೂ ಮೀಸಲಾತಿ ಕಲ್ಪಿಸಿರುವ ಅಂಬೇ ಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸ ಬೇಕು’ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ,ಸಿ.ಆರ್.ಪಿ ಮಂಜಣ್ಣ,ಇಸಿಓ ಬಸವರಾಜ್,ಸಿ.ಬಿ.ಆರ್.ಪಿ ಈರಪ್ಪ,ಎಸ್ ಡಿಎಂಸಿ ಅಧ್ಯಕ್ಷ ಚೌಡೇಶ್,ಮುಖ್ಯಶಿಕ್ಷಕಿ ಶಶಿಕಲಾ, ಗ್ರಾ.ಪಂ ಸದಸ್ಯೆ ಶ್ಯಾಮಲಮ್ಮ,ಮುಖಂಡರಾದ ನಾಗರಾಜ್,ದಳ ಪತಿ ಮೂಟೇಗೌಡ್ರು,ಕೃಷ್ಣಪ್ಪ,ಶಶಿಕಿರಣ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆನಂದಪ್ಪ,ಶಕುಂತಲಾ,ಪ್ಯಾರಿಮಾ ಬೇಗಂ,ಸಿ.ಆರ್.ಪಿ ಗಳಾದ ವಿರೇಶ್,ಲೊಕೇಶ್,ರಾಜಶೇಖರ್, ನಾಗಲಿಂಗಸ್ವಾಮಿ,ರವಿಪ್ರಸಾದ್,ಶ್ರಿದೇವಿ,ಪೊಲೀಸ್ ಇಲಾಖೆ ಮಾರುತಿ,ಶಿಕ್ಷಕರಾದ ರವಿಕುಮಾರ್,ವಿಜಯಲಕ್ಷ್ಮಿ .ಗ್ರಾಮದ ಮುಖಂಡರಾದ ರಾಮಣ್ಣ. ಗ್ರಾಪಂ ಸದಸ್ಯ ಕೃಷ್ಣಪ್ಪ.ಮುಖಂಡರಾದ ಕಂಪಳೇಶ್.ಬಾಬಣ್ಣ.ರಾಜಶೇಖರ್,ಸುಧಾ,ಇಂದಿರಾ,ತಿಪ್ಪೇಸ್ವಾಮಿ,ಗಂಗಾಧರ್,ಪತ್ರಕರ್ತ ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಮುಂತಾದವರು ಹಾಜರಿದ್ದರು.