ವಿದ್ಯಾರ್ಥಿಗಳೇ ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ : ಎಸ್‍ಟಿಎಸ್

ಮೈಸೂರು, ನ.17: ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ಕಳೆದ 8 ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ತೆರೆದಿದ್ದು ವಿದ್ಯಾರ್ಥಿಗಳು ಸರ್ಕಾರದ ಮಾರ್ಗಸೂಚಿ ಅನುಸರಿಸಿ ತರಗತಿಗೆ ಹಾಜರಾಗುತ್ತಿದ್ದಾರೆ.
ಇಂದಿನಿಂದ ಪದವಿ ಕಾಲೇಜು, ಸ್ನಾತಕೋತ್ತರ ಮತ್ತು ಡಿಪೆÇ್ಲಮಾ ಕಾಲೇಜುಗಳು ಆರಂಭವಾಗಿದ್ದು, ರಾಜ್ಯ ಸರಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವಿ.ವಿ.ಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿವೆ.
ತರಗತಿ ಕೊಠಡಿಯ ಬೋಧನೆಯ ಜತೆಗೆ ಆನ್ಲೈನ್ ಹಾಗೂ ಆಫ್ ಲೈನ್ ಬೋಧನೆಗಳು ನಿರಂತರವಾಗಿರಲಿವೆ. ಸುರಕ್ಷತಾ ಕ್ರಮವಾಗಿ ಕಾಲೇಜು ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ಕಾಲೇಜು ಪ್ರವೇಶಿಸಲು ಕೊರೋನಾ ನೆಗೆಟಿವ್ ರಿಪೆÇೀರ್ಟ್ ಕಡ್ಡಾಯವಾಗಿದೆ, ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಕಾಲೇಜಿಗೆ ಬರಬೇಕಿದೆ. ಅಲ್ಲದೆ ಪೆÇೀಷಕರ ಒಪ್ಪಿಗೆ ಪತ್ರವನ್ನು ತರಬೇಕಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿ ನಡೆಸಲು ಸರ್ಕಾರ ಸೂಚಿಸಿದೆ.
ಏತನ್ಮಧ್ಯೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ವಿದ್ಯಾರ್ಥಿಗಳೇ ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದ್ದಾರೆ.
ಇಂದಿನಿಂದ ಕಾಲೇಜುಗಳು ಆರಂಭವಾಗುತ್ತಿವೆ. ಶೈಕ್ಷಣಿಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಅತಿ ಅವಶ್ಯಕ. ಆದರೆ ಕೊರೋನಾ ಕಾರಣದಿಂದ ಈ ಕಠಿಣ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಷ್ಟೇ ಅಗತ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಲೇಬೇಕು. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಮಹಾಮಾರಿ ಬಗ್ಗೆ ನಿರ್ಲಕ್ಷ್ಯ ಬೇಡ. ಈ ಸೋಂಕು ಸಾಂಕ್ರಮಿಕ ಮಾದರಿಯಲ್ಲಿ ಹರಡುವುದರಿಂದ ಒಬ್ಬರಿಗೆ ಬಂದರೆ ಜೊತೆಗಿರುವ ಎಲ್ಲರಿಗೂ ಬರುತ್ತದೆ ಎಂಬ ಅಂಶವನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಜಾಗ್ರತೆಯಿಂದ ಇರಿ, ಸುರಕ್ಷಿತವಾಗಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.
ಬಹಳ ದಿನಗಳ ನಂತರ ಕಾಲೇಜು ಪ್ರವೇ ಶಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಉತ್ಸುಕತೆ ಕಂಡು ಬಂತಾದರೂ ಕೊರೋನಾ ಮಹಾಮಾರಿಯಿಂದಾಗಿ ಬಹಳ ದಿನಗಳ ನಂತರ ಭೇಟಿಯಾದ ಸ್ನೇಹಿತರನ್ನು ಕೈಕುಲುಕಿ, ಪ್ರೀತಿಯಿಂದ ಆಲಂಗಿಸಿ ಮಾತನಾಡಿಸುವಂತಿಲ್ಲವೆಂಬ ಬೇಸರ ವ್ಯಕ್ತವಾಗಿತ್ತು.
ವಿದ್ಯಾರ್ಥಿಗಳ ಕಾಲೇಜು ಆವರಣ ಪ್ರವೇಶದ್ವಾರದಲ್ಲೇ ಅವರ ಕೈಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಿರುವುದು, ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸುವುದು, ಪಾಲಕರ ಒಪ್ಪಿಗೆ ಪತ್ರ ಪರಿಶೀಲಿಸುವುದು ಸರ್ವೇ ಸಾಮಾನ್ಯವಾಗಿ ಕಂಡು ಬಂತು.