ವಿದ್ಯಾರ್ಥಿಗಳೆ ನಿಮ್ಮ ಪೋಷಕರಿಗೆ ಮತದಾನದ ಮಹತ್ವನ್ನು ತಿಳಿಸಿ


(ಸಂಜೆವಾಣಿ ಪ್ರತಿನಿಧಿಯಿಂದ)
ಸಿರುಗುಪ್ಪ, ಏ.15 : ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ “ವಿದ್ಯಾರ್ಥಿಗಳೆ ನಿಮ್ಮ ಪೋಷಕರಿಗೆ ಮತದಾನದ ಮಹತ್ವನ್ನು ತಿಳಿಸಿ”, “ಸಂವಿಧಾನ ಆಶಾಯದಂತೆ ಕಡ್ಡಾಯವಾಗಿ ಮತದಾನ” ಮಾಡುವಂತೆ ಪ್ರೇರೆಪಿಸಬೇಕೆಂದು ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಹೇಳಿದರು.
ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರ ನಡೆದ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 132ನೇ ಜಯಂತೋತ್ಸವದಲ್ಲಿ ಮಾತನಾಡಿದರು.
ತಾ.ಪಂ.ಇ.ಒ.ಮಡಗಿನ ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ರಾಜೇಶ್ವರಿ, ಜಿ.ಪಂ, ಇ.ಇ.ಎ ತಿಪ್ಪೇಸ್ವಾಮಿ ಪ.ಪಂ ಇಲಾಖೆ ನಿರ್ದೇಶಕ ಪರಮೇಶ್ವರ,ವಾರ್ಡನ ಅಮರೇಶ್ವರಿ ಇದ್ದರು.