ವಿದ್ಯಾರ್ಥಿಗಳು ಸ್ವತಂತ್ರದ ಮಹತ್ವ ಅರಿಯಲು ಕರೆ


ಸಂಜೆವಾಣಿವಾರ್ತೆ 
ಕುಕನೂರು, ಸೆ.21: ಸಮೀಪದ ಚನ್ನಪ್ಪನ ಹಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಧ್ವಜಾರೋಹಣ ಸಮಾರಂಭ ಜರುಗಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಹೊಡೆದು ಧ್ವಜಾರೋಹಣ ನೆರವೇರಿಸಿದರು . ಶಾಲಾ ಮುಖ್ಯೋಪಾಧ್ಯಾಯಿನಿ ಕಾರ್ಯಕ್ರಮ ಉದ್ದೇಶಿಸಿ .. ಧರ್ಮಸಾಗರ್ ಅವರು ಮಾತನಾಡಿ , ಭಾರತ ಸ್ವತಂತ್ರ ಹಾಗೂ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನಾಚರಣೆ ವಿದ್ಯಾರ್ಥಿಗಳಿಗೆ ಮಹತ್ವದ್ದಾಗಿದೆ . ಭಾರತ ಸ್ವಾತಂತ್ರ್ಯೋತ್ಸವ ಬ್ರಿಟಿಷರ ವಿರುದ್ಧ ಜಯಗಳಿಸಿದರೆ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನಾಚರಣೆಯ ರಜಾಕಾರರ ಹಾಗೂ ಹೈದರಾಬಾದ್ ಅವರ ವಿರುದ್ಧ ಜಯಗಳಿಸಿದ ಮಹತ್ವದ ವಿಷಯ ಆಗಿದೆ . ಭಯ ಸ್ವತಂತ್ರ ದಿನಾಚರಣೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಜ್ಞಾನ ಸಂಪತ್ತು ಬೆಳೆಸಿಕೊಳ್ಲ ಬೇಕೆಂದು ಸಲಹೆ ನೀಡಿದರು . ಸಹಶಿಕ್ಷಕಿ ಶಾರದಾ ತೊನಗಟ್ಟಿ ಸ್ವಾಗತಿಸಿ ನಿರೂಪಿಸಿದರು . ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು .

Attachments area