ವಿದ್ಯಾರ್ಥಿಗಳು ಸೌಲಭ್ಯ ಸದ್ಬಳಕೆಗೆ ಸಲಹೆ

ಆನೇಕಲ್.ಏ.೧೧_ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಯುವಕರು ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮಹಾದೇವಪ್ಪ ತಿಳಿಸಿದರು.
ಅವರು ತಾಲ್ಲೂಕಿನ ಜಿಗಣಿಯ ವಿ. ಇನ್. ಹೋಟೆಲ್ ಆವರಣದಲ್ಲಿ ಜಿಗಣಿ ಪೋಲಿಸ್ ಠಾಣೆ ವತಿಯಿಂದ ಆಯೋಜಿಸಿದ್ದ ಪರಿಶಿಷ್ಠ ಜಾತಿ, ಮತ್ತು ಪರಿಶಿಷ್ಠ ಪಂಗಡಗಳ ಮುಖಂಡರ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಿಕೆಯ ಸಮಯದಲ್ಲಿ ಯುವ ಸಮ್ಮೂಹ ಬೇರೆಡೆಗೆ ಆಕರ್ಷಣೆಗೆ ಒಳಗಾಗದೆ ಶ್ರದ್ದೆಯಿಂದ ವಿದ್ಯಾಬ್ಯಾಸ ಮಾಡುವುದರಿಂದ ಜೀವನದಲ್ಲಿ ಗುರಿ ಸಾದಿಸಬಹುದು ಅದಕ್ಕೆ ನಮ್ಮ ಕುಟುಂಬವೇ ಒಂದು ಉದಾಹರಣೆ ಯಾಗಿದೆ ಎಂದರು.
ನಮ್ಮ ಕುಟುಂಬ ಬಡತನದಲ್ಲಿದ್ದರು ಸಹ ನಮ್ಮ ತಂದೆಯವರು ನಮಗೆ ಗುಣ ಮಟ್ಟದ ಶಿಕ್ಷಣವನ್ನು ಕಲ್ಪಿಸಿದ ಅಂಗವಾಗಿ ನಾನು ಇಂದು ಡಿವೈಎಸ್ಪಿ ಯಾಗಿದ್ದೇನೆ ನನ್ನ ಅಣ್ಣ ತಮಿಳುನಾಡಿನಲ್ಲಿ ಐಜಿಯಾಗಿದ್ದಾರೆ ಇದಕ್ಕೆ ಮೂಲ ಕಾರಣಕರ್ತರಾದವರು ನಮ್ಮ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದಿಂದ ಸಾದ್ಯವಾಗಿದೆ ಎಂದು ಯುವಕರಲ್ಲಿ ಸ್ಪೂರ್ತಿ ತುಂಬಿದರು. ಹಿಂದಿನ ಕಾಲದಲ್ಲಿದ್ದ ಆಗೆ ಈಗ ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿದೆ ಇದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು. ಇತ್ತೀಚಿನ ದಿನಗಳಲ್ಲಿ ಸಂಘಟನೆಗಳಲ್ಲಿ ರಾಜಕೀಯ ಲೇಪಿತವಾದುದ್ದರಿಂದ ಸಂಘಟನೆಗಳ ಮೌಲ್ಯಗಳು ಸಮಾಜದಲ್ಲಿ ಕ್ಷೀಣಿಸತೊಡಗಿವೆ ಎಂದರು.
ಯಾವುದೋ ಸಣ್ಣ-ಪುಟ್ಟ ಕಾರಣಗಳಿಂದ ರೌಡಿಶೀಟರ್ ಗಳಾಗಿದ್ದು ಕಳೆದ ೧೦ ವರ್ಷಗಳಲ್ಲಿ ಅವರ ನಡತೆ ಚೆನ್ನಾಗಿದ್ದರೆ ಅವರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗಯಲು ಮೇಲ್ ಅದಿಕಾರಿಗಳಿಗೆ ಶಿಪಾರಸು ಮಾಡಲಾಗುವುದು ಜೊತೆಗೆ ಸಮಾಜದಲ್ಲಿ ಶಾಂತಿ ಕಾಪಾಡಲು ಪೋಲಿಸ್ ಇಲಾಖೆ ಯಾವಾಗಲೂ ಸನ್ನದರಾಗಿದೆ ಎಂದು ಹೇಳಿದರು.
ಜಿಗಣಿ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಶೇಖರ್ ಮಾತನಾಡಿ ನೊಂದ ಜನರಿಗೆ ರಕ್ಷಣೆ ಕೊಡ ಬೇಕಾದದ್ದು ನಮ್ಮ ಪೋಲಿಸ್ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳು ಏನೇ ಇದ್ದರು ಸಹ ಠಾಣೆಗೆ ಬಂದು ನಮ್ಮನ್ನು ಬೇಟಿಯಾಗಿ ದೂರು ನೀಡಿ ನಿಮ್ಮ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಶ್ರಮಿಸುತ್ತೇವೆ ಎಂದರು. ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾದ ಪ್ರಕರಣಗಳನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು, ಸಾರ್ವಜನಿಕರು ಕೂಡ ಪೋಲಿಸರ ಜೊತೆಗೆ ಕೈಜೋಡಿಸುವುದರಿಂದ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಹೋರಾಟಗಾರರಾದ ಜಿಗಣಿ ಶಂಕರ್, ಮುಖಂಡರಾದ ಸಂಪಂಗಿರಾಮಯ್ಯ, ಜಿಗಣಿ ಪುನೀತ್, ಕೊಪ್ಪ ಮುನಿರಾಜು, ಮೈಕೋ ನಾಗರಾಜ್, ನರೇಂದ್ರ ಕುಮಾರ್, ಮಲ್ಲಿಗೆ ಆನಂದ್ ಸೇರಿದಂತೆ ನೂರಕ್ಕೂ ಹೆಚ್ಚು ದಲಿತ ಮುಖಂಡರು ಭಾಗವಹಿಸಿದ್ದರು.