ವಿದ್ಯಾರ್ಥಿಗಳು ಸೇವಾ ಮನೋಭಾನೆ ಬೆಳಸಿಕೊಳ್ಳಿ

ಮುದಗಲ್,ಆ.೦೫- ಸಾರ್ವಜನಿಕರು, ವಿದ್ಯಾರ್ಥಿಗಳು ಸೇವಾ ಮನೋಭಾನೆ ಬೆಳೆಸಿ ಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂದು ಉಪನ್ಯಾಸಕ ಇಸ್ಮಾಯಿಲ್ ಖಾದ್ರಿ ಹೇಳಿದರು.
ಸಮೀಪದ ನವಲಿ ಗ್ರಾಮದಲ್ಲಿ ಜರುಗಿದ ರಾಯಚೂರು ವಿಶ್ವವಿದ್ಯಾಲಯ, ನಾಗರಾಳ ಸಜ್ಜಲಶ್ರೀ ಕಲಾ ಪದವಿ ಮಹಾವಿದ್ಯಾಲಯದ ಆಶ್ರಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು. ಇಂದು ಮೊಬೈಲ್ ನಂತ ಆಧುನಿಕ ಪರಿಕಾರಗಳನ್ನು ಅತಿ ಹೆಚ್ಚಿ ಬಳಕೆ ಮಾಡುತ್ತ ಸೋಮಾರಿಗಳಾಗುತ್ತಿದ್ದಾರೆ. ಸಾರ್ವಾಜನಿಕರಲ್ಲಿ ಸೇವಾ ಮನೋಭಾನೆ ಕಡಿಮೆಯಾಗುತ್ತಿದೆ.
ವಿದ್ಯಾರ್ಥಿದೆಸೆಯಲ್ಲಿರುವಾಗಲೇ ಸೇವಾ ಮನೋಭಾವನೆ ಬೆಳೆಸಿಕೊಂಡು ಗುಣಮಟ್ಟದ ಸಮಾಜ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಸೇವಾ ಯೋಜನೆ ಘಟಕಕ್ಕೆ ಸುಧೀರ್ಘ ಇತಿಹಾಸ ಇದೆ. ಸೋವಾ ಮನೋಭಾವನೆಯಿಂದ ನಾಯಕ್ವದ ಗುಣ ಬೆಳೆಯುತ್ತದೆ. ದೇಶದ ಆರ್ಥಿಕತೆ ವೃದ್ಧಿಯಾಗುತ್ತದೆ. ಅನೇಕ ಉಪಯೋಗಳು ಆಗುತ್ತದೆ ಎಂದರು.
ಶಿಕ್ಷಕ ಶಿವನಗೌಡ ಪಾಟೀಲ, ಯುವ ಕವಿ ವಿಜಯದಾಸ ನವಲಿ, ಉಪನ್ಯಾಸಕರಾದ ಹನಮೇಶಗೌಡರ, ಯಂಕಪ್ಪ ಕೆಲ್ಲೂರು, ಡಾ. ಶರಣಪ್ಪ ಆನೆಹೊಸೂರು ಮಾತನಾಡಿದರು. ಕಲಾವಿದ ಹನಮದಾಸ ನವಲಿ ಇವರು ಸಂಗೀತ ಸೇವೆ ನೀಡಿದರು.
ಮಾಜಿ ದಳಪತಿ ಯಲ್ಲಪ್ಪ ಸಹುಕಾರ ಬಂಡರಗಲ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಶರಣಪ್ಪ ಆನೆಹೊಸೂರು ಅಧ್ಯಕ್ಷತೆ ವಹಿಸಿದ್ದರು. ಬೈಲಪ್ಪ ನಾಯಕ, ಡಾ.ಮಲ್ಲೇಶ ಹೂಗಾರ, ಪಂಚಾಕ್ಷರಯ್ಯ ಹಿರೇಮಠ ಇದ್ದರು.