ವಿದ್ಯಾರ್ಥಿಗಳು ಸೇವಾ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಿ: ಕೋರಿ ವೀರುಪಾಕ್ಷಪ್ಪ.


ಸಂಜೆವಾಣಿವಾರ್ತೆ
ಹರಪನಹಳ್ಳಿ.ಜ21: ವಿದ್ಯಾರ್ಥಿಗಳು ಎನ್.ಎಸ್.ಎಸ್.ಶಿಬಿರದಿಂದ ನಾಯಕತ್ವ ಹಾಗೂ ಸೇವಾ ಮನೋಭಾವ ಗುಣಗಳು ಬೆಳೆಯುತ್ತವೆ ಎಂದು ಪಟ್ಟಣದ ಅಂಬ್ಲಿ ದೊಡ್ಡ ಭರ್ಮಪ್ಪ ಕಾಲೇಜು ಆಡಳಿತ ಮಂಡಳಿ ಅದ್ಯಕ್ಷ ಕೋರಿ ವಿರುಪಾಕ್ಷಪ್ಪ ಹೇಳಿದರು.
ತಾಲೂಕಿನ ಚಿರಸ್ತಹಳ್ಳಿ ಗ್ರಾಮದ ತೇರುಬೀದಿ ಆವರಣದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ವೀರಶೈವ ವಿದ್ಯಾವರ್ಧಕ ಸಂಘ ಮತ್ತು ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಮಾನತೆ, ಭಾವೈಕತೆ ಬೆಳೆಸುತ್ತದೆ. ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನು ಕಲಿಸಿಕೊಡುತ್ತದೆ ಎಂದ ಅವರು ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ತಿಗಳು ಕಠೀಣ ಪರಿಶ್ರಮವಹಿಸಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಎಡಿಬಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ, ಟಿಎಪಿಸಿಎಂಎಸ್  ಮಾಜಿ ಅಧ್ಯಕ್ಷ  ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ಮಾತನಾಡಿದರು. ಎಡಿಬಿ ಕಾಲೇಜಿನ ಪ್ರಾಚಾರ್ಯ ಡಾ.ಸಿದ್ದಲಿಂಗಮೂರ್ತಿ  ಸಮಾರಂಭದ ಅದ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ವಕೀಲ ಆರುಂಡಿ ನಾಗರಾಜ, ಎಡಿಬಿ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಅಮೃತ ಬಿ.ಮಂಜುನಾಥ, ಪಿ.ಜಿ.ದೊಡ್ಡಬಸಪ್ಪ, ಸಂಯೋಜಾನಾಧಿಕಾರಿ ಡಾ.ಕುಮಾರ, ಶಿಬಿರಾಧಿಕಾರಿ ಡಾ.ಎ.ಎಂ.ರಾಜಶೇಖರಯ್ಯ, ಎಸ್.ಆನಂದ, ಸಹ ಶಿಬಿರಾಧಿಕಾರಿ ನವಾಜ್ ಬಾಷ ಸಿ.ಡಾ.ಗೋವರ್ಧನ, ಕೆ.ಆನಂದ, ವೀರೇಶಗಡ್ಡಿ, ಲತಾ ಬಣಕಾರ ಚಂದ್ರಪ್ಪ, ಕೆ.ಎಂ.ಚನ್ನಮಲ್ಲಿಕಾರ್ಜುನಯ್ಯ, ವಿದ್ಯಾರ್ಥಿ ಪ್ರತಿನಿಧಿಗಳಾದ ರೇಣುಕಾಪ್ರಸಾದ ಕಲ್ಮಠ, ಜೆ.ದರ್ಶನ, ತಿಷಾ ಜೆ ಪಾಟೀಲ್, ಸೇರಿದಂತೆ ಇತರರು ಇದ್ದರು.