ವಿದ್ಯಾರ್ಥಿಗಳು ಸಾಧಿಸುವ ಛಲ ಮೈಗೂಡಿಸಿಕೊಳ್ಳಲು ಕರೆ

ಸಂಜೆವಾಣಿ ವಾರ್ತೆ
ಕುಕನೂರು, ಫೆ.26: ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಏಕಾಗ್ರತೆಯಿಂದ ಓದಿನಲ್ಲಿ ತೊಡಗಿಕೊಳ್ಳುವುದರಿಂದ ಗುರಿ ಸಾಧನೆಯತ್ತ ಹೆಜ್ಜೆ ಹಾಕಬಹುದು ಎಂದು ನಿವೃತ್ತ ಉಪನ್ಯಾಸಕರಾದ ಎಸ್.ಎಮ್.ಹಿರೇಮಠ ಹೇಳಿದರು.
ತಾಲೂಕಿನ ಅಡೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ರುದ್ರಮ್ಮ, ರುದ್ರಪ್ಪ ಅಂಗಡಿ ರಾಜೂರು. ಹಾಗೂ ಶಂಕ್ರಪ್ಪ ಸಿದ್ದಪ್ಪ ಜಮಖಂಡಿ, ಮನ್ನಾಪೂರು ಇವರ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತ  ಕನ್ನಡಿಗರಲ್ಲಿ ಕನ್ನಡ ನೆಲ, ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಮುಡಿಸುವ ಕೆಲಸ ಮಾಉತ್ತಾ ಕನ್ನಡಿಗರಲ್ಲಿ ಜಾಗ್ರತವಾಗಿರುವ ಕನ್ನಡಾಭಿಮಾನವನ್ನು ಬಡಿದೆಬ್ಬಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಮ್ಮನ ತೇರನ್ನು ಎಳೆಯುವ, ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ನಾವು ಮಾಡುವ ಯಾವುದೇ ಕೆಲಸ ಕೀಳಲ್ಲ, ಆದರೆ ನಾವು ಮಾಡುವ ಕೆಲಸದ ಮೇಲೆ ಶ್ರದ್ದೆ ಹಾಗೂ ಭಕ್ತಿಯನ್ನು ಇಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು ನಾವೂ ಜೀವನದಲ್ಲಿ ಯಶಸ್ವಿಯಾಗಿ ವ್ಯಕ್ತಿಯಾಗಲೂ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಸಾಧಿಸುವ ಛಲದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಏಕಾಗ್ರತೆಯಿಂದ ಓದಿ ಸಾಧಿಸುವ ಗುರಿಯನ್ನು ಹೊಂದಬೇಕು ಎಂದು ಹೇಳಿದರು.
ಹಿರಿಯ ಉಪನ್ಯಾಸಕರಾದ ಆರ್.ಪಿ.ರಾಜೂರು ಮಾತನಾಡಿ ವಿದ್ಯಾರ್ಥಿಗಳು ನಿರಂತರ ಓದುವುದನ್ನು ರೂಡಿಸಿಕೊಳ್ಳಬೇಕು ಹಾಗೂ ನಮಗೆ ಅನ್ನ ನೀಡುವ ಅನ್ನದಾತ ಹಾಗೂ ಜೀವನ ನೀಡಿದ ತಂದೆ ತಾಯಿ, ನಮ್ಮ ಗುರುಹಿರಿಯರನ್ನು ಸದಾ ಗೌರವದಿಂದ ಕಾಣಬೇಕು ಎಂದರು.
ದತ್ತಿ ದಾನಿಗಳಾದ ಶರಣಪ್ಪ ರು ಅಂಗಡಿ ಹಾಗೂ ದ್ಯಾಮಣ್ಣ ಜಮಖಂಡಿ ಹಾಗೂ ಪ್ರಮಖರಾದ ಡಾ|| ಫಕೀರಪ್ಪ ವಜ್ರಬಂಡಿ, ಮಲ್ಲಿಕಾರ್ಜುನ ಗಡಿಗಿ, ಶಿವಪ್ಪ ದಳವಾಯಿ, ತಾಲೂಕ ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ, ಫೀರಸಾಬ ದಪೇದಾರ, ಬಸವರಾಜ ಮೇಟಿ, ಅಶೋಕ ಪತ್ತಾರ, ದೇವಣ್ಣ ಶಿರೂರು, ಸಂಗಪ್ಪ ಎಮ್ ಕಿಂದರಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಅಡೂರು, ಸುರೇಶ ಅಬ್ಬಿಗೇರಿ, ವಿರಯ್ಯ ವಿ ಹಿರೇಮಠ ಅಡೂರು, ಹಾಗೂ ಶಿಕ್ಷಕಿಯರಾದ ರಶ್ಮೀ ಕಬ್ಬಿಣದ, ರೇಣುಕಾ ಪಾಟೀಲ,ಮಾರುತಿ ಬನ್ನಿಗೊಳ, ಬಸವರಾಜ ಕೊಡ್ಲಿ, ನಿಂಗಪ್ಪ ಕುರಿ, ಹಾಗೂ ಇರತರಿದ್ದರು.