ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಅಸ್ಲಮ್ ನಾಲಬಂದ

ಅಥಣಿ :ಸೆ.2: ವಿದ್ಯಾರ್ಥಿಗಳ ಪ್ರತಿಭೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರ ಪ್ರತಿಭಾ ಕಾರಂಜಿಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚು ಪೆÇ್ರೀತ್ಸಾಹ ನೀಡಿದಂತಾಗಿದೆ ಎಂದು ಮುಸ್ಲಿಂ ಸಮಾಜದ ಮುಖಂಡ ಅಸ್ಲಮ್ ನಾಲಬಂದ ಅವರು ಹೇಳಿದರು.
ಅವರು ಪಟ್ಟಣದ ಎ ಕೆ ಹೈಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ ವಲಯ ಮಟ್ಟದ ಉರ್ದು ಕ್ಲಸ್ಟರ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು ಅವರು ಮುಂದೆ ಮಾತನಾಡುತ್ತಾ ಈ ಹಿಂದೆ ವಿದ್ಯೆ ಕಲಿಯಲು ಇಷ್ಟು ಸೌಕರ್ಯಗಳಿರಲಿಲ್ಲ ದೂರದ ಊರಿಂದ ನಡೆದು ಶಾಲೆಗೆ ಬರಬೇಕಾಗಿತ್ತು ಆದರೆ ಈಗ ಎಲ್ಲಾ ಸೌಕರ್ಯಗಳಿದ್ದು, ಸರ್ಕಾರದಿಂದ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗಿದ್ದು, ಸರಕಾರ ನೀಡಿರುವ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಕರೆ ನೀಡಿದರು,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಿದ್ದರಾಮ ಲೋಕನ್ನವರ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅನುಕೂಲವಾಗಿವೆ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಗುರಿಮುಟ್ಟುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಆರ್ ಪಿ ಜಾಫರ್ ಶರೀಫ್ ಚಬನೂರ ಪ್ರಸ್ತಾವಿಕವಾಗಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಸಜ್ಜಾದ ನಸೀನ್ ಹಜರತ್ ಸೈಯದ್ ಷಾ ಹುಸೇನ ಪೀರ ಖಾದ್ರಿ ಮಾತನಾಡಿದರು ಕಾರ್ಯಕ್ರಮದಲ್ಲಿ ಒಟ್ಟು 28 ಶಾಲೆಗಳು ಹಾಗೂ 500 ಮಕ್ಕಳು ಭಾಗವಹಿಸಿದ್ದರು.
ಈ ವೇಳೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಥಣಿ ತಾಲೂಕಾಧ್ಯಕ್ಷ ಜಿ ಎಂ ಹಿರೇಮಠ, ಅಸ್ಲಮ್ ಡಾಂಗೆ, ಸಲೀಮ್ ದ್ರಾಕ್ಷಿ, ಕೆ ಟಿ ಕಾಂಬಳೆ, ಬಿ ಎಲ್ ಪೂಜಾರಿ, ನಾಸೀರಹುಸೇನ ಶೇಖ್, ಅಯಾಜ ಮಾಸ್ಟರ್, ಬಿ ಎಲ್ ಮೂಲಿಮನಿ, ಸಿರಾಜ್ ಸನದಿ, ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ಜುಬೇರ್, ಮೌಲಾನಾ ಇಮ್ತಿಯಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು,