ವಿದ್ಯಾರ್ಥಿಗಳು ಸಂಸ್ಕಾರ ಕಲಿಯಬೇಕು


(ಸಂಜೆವಾಣಿ ವಾರ್ತೆ)
ಗುಳೇದಗುಡ್ಡ ಜು.5- ಮಕ್ಕಳಿಗೆ ಸಂಸ್ಕಾರ ಮೊದಲು ಕಲಿಸಬೇಕು ಅದರ ಜೊತೆಗೆ ಒಳ್ಳೆಯ ಮಾತು, ಒಳ್ಳೆಯ ನಡತೆ ಕಲಿಸಬೇಕು. ಅದರ ಜೊತೆಗೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಲು ತಿಳಿಸಬೇಕು. ತಂದೆ ತಾಯಿಗಳಿಗೆ ಪ್ರೀತಿ, ಗುರುವಿನ ಬಗ್ಗೆ ಭಕ್ತಿ ಗೌರವ ಇದ್ದಾಗ ಮಾತ್ರ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ ಎಂದು ಪ್ರಾಚಾರ್ಯ ರಾಮಚಂದ್ರ ಭಜಂತ್ರಿ ಹೇಳಿದರು.
ಅವರು ಸಮೀಪದ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ಶಾಲೆಯಲ್ಲಿ ನಡೆದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಎಂದರೆ ಅಜ್ಞಾನವನ್ನು ಹೋಗಲಾಡಿಸುವವ ಎಂದರ್ಥ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಗುರುವಿನ ಒಲುಮೆ ಗಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಂಕರರಾವ್ ಕುಲಕರ್ಣಿ, ಬಸವರಾಜ ಸಿಂದಗಿಮಠ, ನಿಂಗಣ್ಣ ಚೂರಿ, ಬಿ.ಎಂ. ಅಮಾತಿಗೌಡರ, ಬಿ.ಆರ್. ಚಿಕ್ಕಣ್ಣವರ, ರಮೇಶ ಹಂಜಿ, ರಮೇಶ ಕತ್ತಿಕೈ, ಭಾಗ್ಯಲಕ್ಷ್ಮೀ ಟಿ.ಎಚ್. ರೇಣುಕಾ ಶಿಸ್ತಗಾರ, ಕೀರ್ತಿ ಬಡಿಗೇರ, ಅಕ್ಷತಾ ಕೋಟಿ, ಮಹೇಶ ಬಡಕನ್ನವರ, ಶ್ರೀನಿವಾಸ ಈಳಗೇರ, ಅಶೋಕ ಪೂಜಾರಿ ರಘುವೀರ ಕೇಶವಸ್ವಾಮಿ, ಪ್ರಶಾಂತ ಯಡಹಳ್ಳಿ, ಎಸ್.ಎಸ್. ರಾಠೋಡ , ವಿದ್ಯಾರ್ಥಿಗಳಾದ ಸೃಷ್ಟಿ ರಜಪೂತ, ಸಂಜೋತಾ ವಾಸ್ಟರ್ ಮತ್ತಿತರರಿದ್ದರು.