ಆನೇಕಲ್.ಸೆ.೨೪:ಪ್ಲಾಸಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಜೊತೆಗೆ ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ನಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಡಸ್ ಇಂಟರ್ ನ್ಯಾಷ್ ನಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ಸಂಗ್ರಹಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಪಡೆಯಲಾಗುತ್ತಿದೆ ಎಂದು ಮುತ್ತಾನಲ್ಲೂರು ಚಂದ್ರಕಲಾ ರವರು ತಿಳಿಸಿದರು.
ಅವರು ಮುತ್ತಾನಲ್ಲೂರು ಗ್ರಾಮದಲ್ಲಿರುವ ಮಹಾತ್ಮ ಶಾಲೆಯಲ್ಲಿ ಇಂಡಸ್ ಇಂಟರ್ ನ್ಯಾಷ್ ನಲ್ ಸ್ಕೂಲ್ ಬೆಂಗಳೂರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಸ್ವೀಕರಿಸಿ ಮಾತನಾಡಿದರು. ಕಳೆದ ಒಂದು ವರ್ಷಗಳಿಂದ ಮುತ್ತಾನಲ್ಲೂರು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಸಂಬಂದಿಸಿದ ಎಲ್ಲಾ ರೀತಿಯಾದ ಕವರ್ ಗಳು ಮತ್ತು ವಸ್ತುಗಳನ್ನು ಇಂಡಸ್ ಇಂಟರ್ ನ್ಯಾಷ್ ನಲ್ ಸ್ಕೂಲ್ ವತಿಯಿಂದ ಖುದ್ದಾಗಿ ಬಂದು ತೆಗೆದುಕೊಂಡು ಹೋಗುತ್ತಿದ್ದೇವೆ ಜೊತೆಗೆ ಕೇಜಿಗೆ ಪ್ಲಾಸ್ಟಿಕ್ ಗೆ ೧೦ ರೂಪಾಯಿ ಯಂತೆ ಹಣವನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ಇಂಡಸ್ ಸ್ಲೂಲ್ ನ ಶ್ರೀಮತಿ ಸೌಮ್ಯ ರವರು ಮಾತನಾಡಿ ಆನೇಕಲ್ ತಾಲ್ಲೂಕಿನಲ್ಲಿರುವ ವಿದ್ಯಾರ್ಥಿಗಳು ತಾವು ಬಳಸಿದ ಪ್ಲಾಸ್ಟಿಕ್ ಮತ್ತು ತಮ್ಮ ಮನೆಯವರು ಬಳಸಿದ ಪ್ಲಾಸ್ಟಿಕ್ ನ್ನು ಒಂದೆಡೆ ಸಂಗ್ರಹಿಸಿ ನಮ್ಮ ಪೋನ್ ನಂಬರ್ ಗೆ ಕರೆ ಮಾಡಿದರೆ ಸಾಕು ಖುದ್ದಾಗಿ ನಾವೇ ಬಂದು ಪ್ಲಾಸ್ಟಿಕ್ ನ್ನು ತೆಗೆದುಕೊಂಡು ಹೋಗ ಲಾಗುವುದು ಎಂದರು. ಇಂದು ಮಹಾತ್ಮ ಶಾಲೆಯಲ್ಲಿ ಸುಮಾರು ೧೦೦ ಕೇಜಿ ಹೆಚ್ಚು ಪ್ಲಾಸ್ಟಿಕ್ ಕನ್ನು ಸಂಗ್ರಹಿಸಿದ್ದು ನಾವು ತೆಗೆದುಕೊಂಡ ಹೋದ ಪ್ಲಾಸ್ಟಿಕ್‌ನ್ನು ಮರು ಬಳಕೆ ಮಾಡಲಾಗುವುದು, ನಮ್ಮ ಗುರಿ ಒಂದೆ ಪ್ಲಾಸ್ಟಿಕ್ ಮುಕ್ತ ಸಮಾಜ ಮಾಡುವುದು ಎಂದು ಅವರು ಹೇಳಿದರು.
ಸ್ಥಳದಲ್ಲಿ ಶಿಕ್ಷಕರಾದ ಗೀತಾಂಜಲಿ, ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿಶ್ವನಾಥ್ ರೆಡ್ಡಿ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.