ವಿದ್ಯಾರ್ಥಿಗಳು ಶಾಲೆಗೆ ತಪ್ಪದೇ ಬರುವುದಕ್ಕೆ ಬಿಸಿಯೂಟ ಸಿಬ್ಬಂದಿಯವರು ಕಾರಣ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಆ.27. ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಯವರ ಅಡಿಗೆ ರುಚಿಯಿಂದಲೇ ಶಾಲೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಶಾಲೆ ತಪ್ಪಿಸದೇ ಬರುತ್ತಿರುವುದು ಎಂದು ಸ್ಥಳೀಯ ಸ.ಮಾ.ಹಿ.(ಉನ್ನತೀಕರಿಸಿದ) ಪ್ರಾ.ಶಾಲೆ ಮುಖ್ಯಗುರು ಶಿವಕುಮಾರ್ ತಿಳಿಸಿದರು. ಆ.26 ರಂದು ಶನಿವಾರ ತಮ್ಮ ಶಾಲೆಯಲ್ಲಿ ಬಿಸಿಯೂಟ ತಯಾರಿಕರಿಕೆ ಅಡಿದಾರರಿಗೆ ಏರ್ಪಡಿಸಿದ್ದ ಪಿಎಂ.ಪೋಷಣ್ ಯೋಜನೆ ಕರ್ನಾಟಕ ಸರ್ಕಾರ ಅಡಿಯಲ್ಲಿ, ಶಾಲೆಗಳಲ್ಲಿ ಆಹಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಸಿಯೂಟ ಯೋಜನೆಯು 2003 ರಿಂದ ಜಾರಿಗೆ ಬಂದಿದೆ. ಇಲ್ಲಿಯವರೆಗೆ ಅಡಿಗೆ ತಯಾರಿಕರು ಉತ್ತಮವಾಗಿ ಅಡಿಗೆ ತಯಾರಿಸಿ ವಿದ್ಯಾರ್ಥಿಗಳ ಮೆಚ್ಚುಗೆ ಪಡೆದು ಯೋಜನ ಯಶಸ್ವಿಯಾಗುವುದಕ್ಕೆ ಕಾರಣರಾಗಿದ್ದಾರೆಂದು ತಿಳಿಸಿದರು. ಪ್ರಾರಂಭದಲ್ಲಿ ಸಿರಿಗೇರಿ ಕ್ಲಸ್ಟರ್‍ನ ಸಿಆರ್‍ಪಿ ಅರುಣಕುಮಾರ ಮಾತನಾಡಿ ಬಿಸಿಯೂಟದ ಅಡಿಗೆ ತಯಾರಿಸುವಲ್ಲಿ ನಿಮ್ಮ ಸೇವೆ ಅಮೂಲ್ಯ, ಸೇವಾ ಮನೋಭಾವದಿಂದ ದಾಸ್ತಾನು ಕೊರತೆ ಇದ್ದಾಗಲೂ ಕೆಲವರು ತಮ್ಮ ಮನೆಯಿಂದ ತರಕಾರಿ ಧಾನ್ಯ ತಂದು ಸರಿದೂಗಿಸಿ ಅಡಿಗೆ ತಯಾರಿಸಿ ಮಕ್ಕಳ ಹಸಿವು ತಣಿಸಿದ್ದೀರಿ. ನಿಮ್ಮ ವೃತ್ತಿ ಶ್ರೇಷ್ಠತೆ, ಕೌಶಲ್ಯ, ಹೆಚ್ಚಿಸಲು, ಸರ್ಕಾರದಿಂದ ಶುಚಿ, ರುಚಿ ಅಂಶಗಳಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರ ಮಾಹಿತಿ ಪಡೆದು ನಿಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕೆಂದು ಕರೆನೀಡಿದರು.
ಮಾಳಾಪುರ ಗ್ರಾಮದ ಸ.ಹಿ.ಪ್ರಾ.ಶಾಲೆ ಮುಖ್ಯಗುರು ಸಜ್ಜನ್ ಇವರು ಮಾತನಾಡಿ ಶಾಲೆಗೆ ಬರುವ ಎಲ್ಲಾ ಮಕ್ಕಳಿಗೆ ನಿಮ್ಮ ಪ್ರೀತಿ ತುಂಬಿ ನಿಮ್ಮ ಸ್ವಂತ ಮಕ್ಕಳಿಗೇ ಎನ್ನುವಂತೆ ಮದ್ಯಾಹ್ನದ ಬಿಸಿಯೂಟ ತಯಾರಿಸುವ ಅನ್ನಪೂರ್ಣೆಯರು ನೀವು. ತರಕಾರಿಗಳ ರೇಟು ಹೆಚ್ಚಾದ ಸಮಯದಲ್ಲಿ ಆಹಾರ ಧಾನ್ಯ ಪೂರೈಕೆ ವ್ಯತ್ಯಯವಾದಲ್ಲಿ ಇರುವ ದಾಸ್ತಾನಿನಲ್ಲಿಯೇ ನಿಮ್ಮ ಪ್ರೀತಿಯನ್ನು ಬರೆಸಿ ಅಕ್ಷರ ದಾಸೋಹ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೀರಿ. ಇದನ್ನು ಪರಿಗಣಿಸಿ ಸರ್ಕಾರವು ನಿಮ್ಮ ಕೌಶಲ್ಯವನ್ನು ಹೆಚ್ಚಿಸಲು ಆಹಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು. ನಂತರ ಕಾರ್ಯಕ್ರಮದಲ್ಲಿ ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿ ಶಿಕ್ಷಕಿ ರಾಧಾ ಇವರು ಬಿಸಿಯೂಟ ಅಡಿಗೆ ತಯಾರಿಕೆ ಮಹಿಳೆಯರಿಗೆ ಸುಚಿತ್ವ, ಅಹಾರ ಧಾನ್ಯಗಳ ರಕ್ಷಣೆ, ರುಚಿ ಹೆಚ್ಚಿಸುವ ಕ್ರಮಗಳ ಕುರಿತ ವಿಡಿಯೋ ದ್ಯಶ್ಯಾವಳಿಗಳ ಮಾಹಿತಿ ನೀಡಿದರು. ವಿವಿಧ ಶಾಲೆಗಳ ಮುಖ್ಯ ಗುರುಗಳಾದ ಮಂಜುನಾಥ ಅಳ್ಳೊಳ್ಳಿ, ಅತಿಥಿ ಶಿಕ್ಷಕ ಬಸವರಾಜ್, ಸಿರಿಗೇರಿ ಕ್ಲಸ್ಟರ್‍ನ ಎಲ್ಲಾ ಹಿ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಿಸಿಯೂಟ ಯೋಜನೆಯ ಅಡಿಗೆ ತಯಾರಿಕೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಎಸ್‍ಡಬ್ಲುಎಸ್ ಶಾಲೆ ಮುಖ್ಯಗುರು ಗೋವಿಂದರಾಜ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.